ನವದೆಹಲಿ : ದೇಶದಲ್ಲಿ ಕೊರೊನಾ ವೈರಸ್ ಹೊಡೆತ ಸುಧಾರಿಸಿಕೊಳ್ಳುವ ಮುನ್ನವೇ ಬ್ಲಾಕ್ ಫಂಗಸ್ ಸೋಂಕು ಕಾಣಿಸಿಕೊಂಡಿತ್ತು. ಇದರ ಬೆನ್ನಲೆ ಬಿಹಾರದಲ್ಲಿ ವೈಟ್ ಫಂಗಸ್ ಕಾಣಿಸಿಕೊಳ್ಳುವ ಮೂಲಕ ಜನರ ಆತಂಕ ಹೆಚ್ಚು ಮಾಡಿತ್ತು. ವೈಟ್ ಫಂಗಸ್, ಬ್ಲಾಕ್ ಫಂಗಸ್ಕ್ಕಿಂತ ಹೆಚ್ಚು ಅಪಾಯಕಾರಿ ಎನ್ನುವ ವರದಿಗಳು ಕೇಳಿ ಬಂದಿದ್ದವು. ಆದರೆ ಈಗ ವೈಟ್ ಫಂಗಸ್ ಬ್ಲಾಕ್ ಫಂಗಸ್ನಷ್ಟು ಅಪಾಯಕಾರಿಯಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ವೈಟ್ ಫಂಗಸ್ ಹರಡುವಿಕೆಗೆ ಸಂಬಂಧಿಸಿದಂತೆ ದೆಹಲಿಯ ಎನ್ಎನ್ಜೆಪಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಅಪಾಯಕ್ಕೂ ಮುನ್ನ ಚಿಕಿತ್ಸೆ ಆರಂಭಿಸಿದರೇ ಒಂದೂವರೆ ತಿಂಗಳಲ್ಲಿ ವೈಟ್ ಫಂಗಸ್ ವಾಸಿ ಮಾಡಬಹುದಾಗಿದ್ದು ಇದು ಬ್ಲಾಕ್ ಫಂಗಸ್ ನಷ್ಟು ಅಪಾಯಕಾರಿ ಅಲ್ಲ ಎಂದು ಹೇಳಿದ್ದಾರೆ.
Fungus grows in cramped & humid spaces so keep ensure that your surroundings are cleaned regularly. Avoid consuming eatables refrigerated for days, eat fresh fruits, let sunlight in your house & wash your masks daily: Medical Director Dr Suresh Kumar, LNJP Hospital, Delhi (21.05)
— ANI (@ANI) May 21, 2021
ವೈಟ್ ಫಂಗಸ್ ರೋಗದ ಗುಣಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು, ಅನಗತ್ಯವಾಗಿ ವೈದ್ಯರ ಸಲಹೆ ಇಲ್ಲದೇ ಯಾವುದೇ ಸಿರಾಯ್ಡ್ ಗಳನ್ನು ತೆಗೆದುಕೊಳ್ಳಬಾರದು ಎಂದು ಅವರು ಸಲಹೆ ನೀಡಿದ್ದಾರೆ.
ಇಕ್ಕಟ್ಟಾದ ಪ್ರದೇಶಗಳಲ್ಲಿ ವೈಟ್ ಫಂಗಸ್ ಬೆಳೆಯುವ ಸಾಧ್ಯತೆಗಳು ಹೆಚ್ಚಿದ್ದು, ಈ ಹಿನ್ನಲೆಯಲ್ಲಿ ಮನೆಯ ಸುತ್ತಲ್ಲೂ ಸ್ಪಚ್ಛತೆಗೆ ಆದ್ಯತೆ ನೀಡಬೇಕು, ಪ್ರಿಡ್ಜ್ನಲ್ಲಿಟ್ಟ ಆಹಾರ ಸೇವನೆ ನಿಲ್ಲಿಸುವುದು ಉತ್ತಮ ಮತ್ತು ತಾಜಾ ಹಣ್ಣು ತರಕಾರಿ ಸೇವನೆಯಿಂದ ವೈಟ್ ಫಂಗಸ್ ತಪ್ಪಿಸಬಹುದು ಎಂದು ಹೇಳಿದ್ದಾರೆ.
ಇನ್ನು ಮನೆಯಲ್ಲಿ ಹೆಚ್ಚು ಸೂರ್ಯನ ಬೆಳಕು ಬೀಳುವಂತೆ ನೋಡಿಕೊಳ್ಳಬೇಕು ಜೊತೆಗೆ ಪ್ರತಿನಿತ್ಯ ತೊಳೆದ ಮಾಸ್ಕ್ ಧರಿಸುವುದರಿಂದ ವೈಟ್ ಫಂಗಸ್ ಸಂಕಷ್ಟದಿಂದ ಪಾರಾಗಬಹುದು ಎಂದು ಡಾ.ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ.