ಖ್ಯಾತ ಹಿನ್ನಲೆ ಗಾಯಕಿ ಶ್ರೇಯಾ ಘೋಷಾಲ್ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಸಂಭ್ರಮವನ್ನು ಅಭಿಮಾನಿಗಳ ಜೊತೆಗೆ ಹಂಚಿಕೆಕೊಂಡಿದ್ದಾರೆ.

ಇಂದು ಮಧ್ಯಾಹ್ನ ಶ್ರೇಯಾ ಗಂಡು ಘೋಷಾಲ್ ಮಗುವಿನ ತಾಯಿಯಾಗಿದ್ದಾರೆ

ಅವರು ಉದ್ಯಮಿ ಶೀಲಾದಿತ್ಯ ಮುಖೋಪಾಧ್ಯಯ ಜೊತೆ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು

ಲಾಕ್ಡೌನ್ ಹಿನ್ನಲೆ ಇತ್ತೀಚೆಗೆ ವರ್ಚಯಲ್ ಮೂಲಕವೇ ಅವರು ತಮ್ಮ ಬೇಬಿ ಶವರ್ ನಡೆಸಿಕೊಂಡಿದ್ದರು

ಮಗುವಿನ ಆಗಮನ ಸುದ್ದಿ ಹಂಚಿಕೊಂಡಿರುವ ಅವರು, ಮನೆ ಮಂದಿಯಲ್ಲಿ ಸಂಭ್ರಮ ಹೆಚ್ಚಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.

ನೆಚ್ಚಿನ ಗಾಯಕಿಗೆ ಮಗು ಆಗಿರುವ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದು, ಶುಭ ಹಾರೈಸುತ್ತಿದ್ದಾರೆ.
