ನವದೆಹಲಿ : ದೇಶದಲ್ಲಿ ಬ್ಲಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ರಾಜ್ಯಗಳಿಗೆ ಆಂಫೊಟೆರಿಸಿನ್-ಬಿ ಇಂಜೆಕ್ಷನ್ ಅನ್ನು ಕೇಂದ್ರ ಸರ್ಕಾರ ರವಾನೆ ಮಾಡುತ್ತಿದೆ.
ಇಂದು ಎರಡನೇ ಹಂತದಲ್ಲಿ ರಾಜ್ಯಗಳಿಗೆ ಆಂಫೊಟೆರಿಸಿನ್-ಬಿ ಇಂಜೆಕ್ಷನ್ ರವಾನೆ ಮಾಡಿದ್ದು, ಹೆಚ್ಚುವರಿಯಾಗಿ 8848 ವಯಲ್ಸ್ ಆಂಫೊಟೆರಿಸಿನ್-ಬಿ ಹಂಚಿಕೆ ಮಾಡಿದೆ.

ಈ ಪೈಕಿ ರಾಜ್ಯಕ್ಕೆ 500 ವಯಲ್ಸ್ ಹಂಚಿಕೆ ಮಾಡಿದ್ದು ಈ ಮೂಲಕ ಈವರೆಗೂ ಕರ್ನಾಟಕಕ್ಕೆ 1270 ವಯಲ್ಸ್ ಅನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ. ಸೋಂಕಿನ ಸಂಖ್ಯೆ ಮತ್ತು ಜನಸಂಖ್ಯೆ ಆಧಾರ ಮೇಲೆ ಆಂಫೊಟೆರಿಸಿನ್-ಬಿ ಹಂಚಿಕೆಯಾಗುತ್ತಿದೆ.
ದೇಶದಲ್ಲಿ ಈವರೆಗೂ ಒಟ್ಟು 23680 ವಯಲ್ಸ್ ಹಂಚಿಕೆ ಮಾಡಲಾಗಿದ್ದು, ಈ ಪೈಕಿ ಗುಜರಾತ್‌ಗೆ 5800, ಮಹಾರಾಷ್ಟ್ರಕ್ಕೆ 5090, ಆಂಧ್ರಪ್ರದೇಶಕ್ಕೆ 2310, ಮಧ್ಯಪ್ರದೇಶಕ್ಕೆ 1830 ಮತ್ತು ಹರಿಯಾಣಕ್ಕೆ 640 ವಯಲ್ಸ್ ಹಂಚಿಕೆ ಮಾಡಿದೆ ಎಂದು ಕೇಂದ್ರ ರಾಸಾಯನಿಕ ರಸಗೊಬ್ಬರ ಸಚಿವಾಲಯದಿಂದ ಮಾಹಿತಿ ನೀಡಿದೆ.