ನವದೆಹಲಿ : ಇಷ್ಟು ದಿನ ಭಾರತದ ದೇಸಿ ವ್ಯಾಕ್ಸಿನ್ ಕೊವ್ಯಾಕ್ಸಿನ್ ಲಸಿಕೆ ಅತ್ಯುತ್ತಮ ಮತ್ತು ಇದು ಎಲ್ಲ ಮಾದರಿಯ ಕೊರೊನಾ ರೂಪಾಂತರಿ ವೈರಸ್ ತಳಿಗಳ ವಿರುದ್ಧ ಹೋರಾಡಬಲ್ಲದು ಎಂದು ಹೇಳುತ್ತಿದ್ದು ಐಸಿಎಂಆರ್ ಈಗ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ನಡುವೆ ಹೋಲಿಸಿದರೆ ಕೋವಿಶೀಲ್ಡ್ ಲಸಿಕೆ ಉತ್ತಮ ಎಂದು ಹೇಳಿದೆ.
ಕೋವಿಶೀಲ್ಡ್ ಎರಡನೇ ಡೋಸ್ ಅವಧಿ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಐಸಿಎಂಆರ್ ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ್, ಕೋವ್ಯಾಕ್ಸಿನ್ ಗಿಂತ ಕೋವಿಶೀಲ್ಡ್ ಪರಿಣಾಮಕಾರಿಯಾಗಿದೆ. ಕೋವಿಶೀಲ್ಡ್ ಮೊದಲ ಡೋಸ್ ಬಳಿಕ ಇಮ್ಯುಡಿಟಿ ಹೆಚ್ಚಾಗಲಿದೆ. ಇದೇ ಕಾರಣಕ್ಕೆ 12ರಿಂದ 18 ವಾರದವರೆಗೆ ಎರಡನೇ ಡೋಸ್ ಅವಧಿ ವಿಸ್ತರಿಸಲಾಗಿದೆ ಎಂದಿದ್ದಾರೆ.

ಇನ್ನು ಕೊವ್ಯಾಕ್ಸಿನ್ ಬಗ್ಗೆಯೂ ಅವರು ಮಾತನಾಡಿದ್ದು, ಕೋವ್ಯಾಕ್ಸಿನ್ ಲಸಿಕೆ ಹಾಕಿದರ ಮೇಲೆ ಇಮ್ಯುಡಿಟಿ ಹೆಚ್ಚಾಗಲಿಲ್ಲ ಈ ಹಿನ್ನಲೆಯಲ್ಲಿ ಅದರ ಎರಡೇ ಅವಧಿಯನ್ನು ವಿಸ್ತರಣೆ ಮಾಡಿಲ್ಲ ಎಂದು ಅವರು ಕೋವಿಶೀಲ್ಡ್ ಅಂತರ ಹೆಚ್ಚಳವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.