ನವದೆಹಲಿ : ಕೊರೊನಾ ರೋಗಿಗಳ ಚಿಕಿತ್ಸಾ ಔಷಧಿಗಳ ಪಟ್ಟಿಯಿಂದ ಪ್ಲಾಸ್ಮಾ ಥೆರಪಿ ಕೈ ಬಿಟ್ಟ ಬೆನ್ನಲೆ ಈಗ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹೊರಗಿಡಬಹುದು ಎನ್ನುವ ಮಾತುಗಳು ಕೇಳಿ ಬಂದಿದೆ.
ಕೊವಿಡ್ ಚಿಕಿತ್ಸೆಗಾಗಿ ಬಳಸುವ ರೆಮ್ಡೆಸಿವಿರ್ ಪರಿಣಾಮಕಾರಿ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಈ ಹಿನ್ನಲೆಯಲ್ಲಿ ಶೀಘ್ರವೇ ರೆಮ್ಡೆಸಿವಿರ್ ಇಂಜೆಕ್ಷನ್ ಅನ್ನು ಕೈಬಿಡಬಹುದು ಎಂದು ದೆಹಲಿಯ ಗಂಗಾ ರಾಮ್ ಆಸ್ಪತ್ರೆ ವೈದ್ಯ ಡಾ. ಡಿ.ಎಸ್. ರಾಣಾ ಸುಳಿವು ನೀಡಿದ್ದಾರೆ.
ಕೊರೊನಾ ಚಿಕಿತ್ಸೆಗಾಗಿ ಬಳಕೆ ಮಾಡಿದ ಪ್ರಾಯೋಗಿಕ ಔಷಧಿಗಳನ್ನು ಹಂತ ಹಂತವಾಗಿ ಕೈಬಿಡಬೇಕಿದೆ. ಈ ಹಿನ್ನಲೆ ರೆಮ್ಡೆಸಿವಿರ್ ಕೂಡಾ ಚಿಕಿತ್ಸಾ ಪಟ್ಟಿಯಿಂದ ಕೈಬಿಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ರೆಮ್ಡೆಸಿವಿರ್ ನೀಡಿದ ಕೊರೊನಾ ಸೋಂಕಿತರು ಮೇಲೆ ಅಧ್ಯಯನ ನಡೆದಿದ್ದು, ರೆಮ್ಡೆಸಿವಿರ್ ಕೊರೊನಾ ರೋಗಿಗಳ ಮೇಲೆ ಪರಿಣಾಮಕಾರಿಗಿಲ್ಲ ಎನ್ನುವ ಅಭಿಪ್ರಾಯ ಮೂಡಿದೆ ಎಂದು ಡಾ.ರಾಣಾ ಅಭಿಪ್ರಾಯಪಟ್ಟಿದ್ದಾರೆ

ಈ ಹಿಂದೆ ಪ್ಲಾಸ್ಮಾ ಬಗ್ಗೆಯೂ ಐಸಿಎಂಆರ್, ಏಮ್ಸ್ ಮತ್ತು ಕೊರೊನಾ ಟಾಸ್ಕ್ ಫೋರ್ಸ್ ತಜ್ಞರು ಅಧ್ಯಯನ ನಡೆಸಿದ್ದರು. ಇದು ಕೊರೊನಾ ರೋಗಿಗಳಿಗೆ ಪರಿಣಾಮಕಾರಿಯಾಗಿಲ್ಲ ಮತ್ತು ಸಾವಿನ ಪ್ರಮಾಣ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ಸಾಬೀತಾಗಿತ್ತು. ಈ ಹಿನ್ನಲೆ ತಜ್ಞರ ಶಿಫಾರಸ್ಸು ಅನ್ವಯ ಇದನ್ನು ಕೊರೊನಾ ಚಿಕಿತ್ಸಾ ಪಟ್ಟಿಯಿಂದ ತೆಗೆದುಹಾಕಲಾಗಿತ್ತು.
ಸದ್ಯ ಇದೇ ಹಾದಿಯಲ್ಲಿ ರೆಮ್ಡೆಸಿವಿರ್ ಕೂಡಾ ಇದ್ದು ಶೀಘ್ರದಲ್ಲಿ ಈ ಚುಚ್ಚುಮದ್ದುನ್ನು ಕೊರೊನಾ ಚಿಕಿತ್ಸಾ ಔಷಧಿಗಳ ಪಟ್ಟಿಯಿಂದ ತೆಗೆದು ಹಾಕಬಹುದು ಎಂದು ಡಾ.ರಾಣಾ ಹೇಳಿದ್ದಾರೆ.