ನವದೆಹಲಿ : ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ಹೆಚ್ಚಳದಿಂದ ದೇಶದಲ್ಲಿ ರಸಗೊಬ್ಬರಗಳ ಬೆಲೆ ಏರಿಕೆಯಾಗಿತ್ತು. ಬೆಲೆ ಏರಿಕೆಯಿಂದ ಕಂಗಲಾಗಿದ್ದ ರೈತರ ನೆರವಿಗೆ ನಿಲ್ಲಲ್ಲು ಕೇಂದ್ರ ಸರ್ಕಾರ ಮುಂದಾಗಿದ್ದು ಡಿಎಪಿ ಗೊಬ್ಬರದ ಮೇಲಿನ ಸಬ್ಸಿಡಿಯನ್ನು 140% ಹೆಚ್ಚಿಸಲು ತಿರ್ಮಾನಿಸಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಒಂದು ಬ್ಯಾಗ್ ಡಿಎಪಿಗೆ ₹500 ರೂ ಬದಲಾಗಿ ₹ 1200 ರೂ ಸಬ್ಸಿಡಿ ಕೇಂದ್ರ ಸರ್ಕಾರ ನೀಡಲಿದೆ. ಹೀಗಾಗೀ ಬೆಲೆ ಏರಿಕೆಯಿಂದ ₹2400 ಆಗಿದ್ದ ಡಿಎಪಿ ಒಂದು ಬ್ಯಾಗ್ ಸದ್ಯ ಹಳೆ ಬೆಲೆ ₹1200 ಸಿಗಲಿದೆ ಎಂದು ರಸಗೊಬ್ಬರ ಸಚಿವಾಲಯ ಹೇಳಿದೆ.
ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಧಾರದಿಂದ ಹೆಚ್ಚುವರಿಯಾಗಿ ₹14,775 ಕೋಟಿ ರೂ. ವ್ಯಯವಾಗಲಿದ್ದು ಸಬ್ಸಿಡಿ ಹೆಚ್ಚಳದಿಂದ ರೈತರ ಮೇಲಿನ ಒತ್ತಡ ತಗ್ಗಲಿದೆ. ಕಳೆದ ತಿಂಗಳು ರಸಗೊಬ್ಬರಗಳ ಬೆಲೆ ಏರಿಕೆಯಿಂದ ದೇಶದ ಅನ್ನದಾತರ ಆಕ್ರೋಶಕ್ಕೆ ಮೋದಿ ಸರ್ಕಾರ ಗುರಿಯಾಗಿತ್ತು.