ಮುಂಬೈ: 2015ರಲ್ಲಿ ತೆರೆ ಕಂಡಿದ್ದ ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಚಲನಚಿತ್ರ ಭಜರಂಗಿ ಭೈಜಾನ್ ಚಿತ್ರ ಬಾಕ್ಸ್ ಆಫಿಸ್‌ನಲ್ಲಿ ಧೂಳೆಬ್ಬಿಸಿತ್ತು. ಈ ಸಿನಿಮಾ ನೋಡಿ ಜನರು ಸಿನಿಮಾವನ್ನು ಮೆಚ್ಚಿಕೊಂಡಿದ್ದರು.

ಇಡೀ ಚಿತ್ರದಲ್ಲಿ ಸಲ್ಮಾನ್ ಖಾನ್, ಕರೀನಾ ಕಪೂರ್ ಖಾನ್, ನವಾಜುದ್ದೀನ್ ಸಿದ್ದಿಕಿ ಹೊರತುಪಡಿಸಿದರೆ ಮುನ್ನಿ ಪಾತ್ರ ನಿರ್ವಹಿಸಿದ್ದ ಪುಟ್ಟ ಹುಡುಗಿ ಹರ್ಷಾಲಿ ಮಲ್ಹೋತ್ರಾ ಎಲ್ಲರ ಗಮನ ಸೆಳೆದ್ದಳು. ಈ ಪುಟ್ಟ ಪ್ರತಿಭೆ ಈಗ ದೊಡ್ಡದಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಹರ್ಷಾಲಿ ಮಲ್ಹೋತ್ರಾ ಈಗ ಇನ್ಸ್ಟಾಗ್ರಾಂ ನಲ್ಲಿ ರಾತ್ರೋರಾತ್ರಿ ಫೇಮಸ್ ಆಗಿದ್ದು ತನ್ನ ಡ್ಯಾನ್ಸ್ ಮೂಲಕ ಮತ್ತೆ ಅಭಿಮಾನಿಗಳನ್ನ ತನ್ನತ್ತ ಸೆಳೆಯುತ್ತಿದ್ದಾಳೆ. ಸಿನಿಮಾ ತೆರಕಂಡ ಆರು ವರ್ಷಗಳ ಬಳಿಕ ಸೋಶಿಯಲ್ ಮಿಡಿಯಾಕ್ಕೆ ಎಂಟ್ರಿ ಕೊಟ್ಟಿರುವ ಹರ್ಷಾಲಿ ಮಲ್ಹೋತ್ರಾ ತನ್ನ ಡ್ಯಾನ್ಸಿಂಗ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದಾಳೆ.
ಇತ್ತೀಚೆಗೆ ಹರ್ಷಾಲಿ ತನ್ನ ವಿಡಿಯೋವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಸುನಿಧಿ ಚೌಹಾನ್ ಅವರ ಸಾಜ್ನಾ ವೆ ಸಜ್ನಾ ಹಾಡಿನಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಹರ್ಷಾಲಿ ಜನರಲ್ಲಿ ಜನಪ್ರಿಯವಾಗುತ್ತಿರುವ ರೀತಿ ನೋಡಿದರೆ, ಮುಂದಿನ ದಿನಗಳಲ್ಲಿ ಹರ್ಷಾಲಿ ಬಾಲಿವುಡ್ ಮತ್ತಷ್ಟು ಫೇಮಸ್ ಆಗುವ ಮುನ್ಸೂಚನೆ ನೀಡುತ್ತಿದ್ದಾಳೆ.
