ಬೆಂಗಳೂರು: ಕೋವಿಡ್ ಸೋಂಕಿತರಿಗೆ ಸಕಾಲಕ್ಕೆ ಆಕ್ಸಿಜನ್ ಸೌಲಭ್ಯ ಕಲ್ಪಿಸುವ ʼಬ್ರೀತ್ ಇಂಡಿಯಾʼ ಅಭಿಯಾನಕ್ಕೆ ಬೆಂಗಳೂರಿನಲ್ಲಿ ಬುಧವಾರ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ನಡೆಯುತ್ತಿರುವ ಬ್ರೀತ್ ಇಂಡಿಯಾ ಅಭಿಯಾನದ ಮೂಲಕ ದೇಶಾದ್ಯಂತ ಒಂದು ಲಕ್ಷ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಉದ್ದೇಶ ಇದೆ. ಈಗಾಗಲೇ ಇವರು ದೇಶಾದ್ಯಂತ ಏಳು ನಗರಗಳಲ್ಲಿ ಕೆಲಸ ಮಾಡಿದ್ದು, ಇದೀಗ ಬೆಂಗಳೂರಿನಲ್ಲೂ ಚಾಲನೆ ಕೊಡುತ್ತಿದ್ದಾರೆ ಎಂದರು.

ಸದ್ಯದ ಸಂಕಷ್ಟದ ಸಮಯದಲ್ಲಿ ಆಮ್ಲಜನಕ ಸಾಂದ್ರಕ ಒಂದೊಳ್ಳೆ ಪರಿಹಾರೋಪಾಯವಾಗಿದ್ದು, ಸುಲಭವಾಗಿ ಸಾಗಿಸಬಹುದು. ಮನೆಯಲ್ಲೇ ಇಟ್ಟುಕೊಂಡು ಸರಳವಾಗಿ ಬಳಕೆ ಮಾಡಬಹುದು ಎಂದು ಡಿಸಿಎಂ ತಿಳಿಸಿದರು.
ಈ ಸಂದರ್ಭದಲ್ಲಿ ಕೆಎಸ್ಆರ್ ಪಿ ಹೆಚ್ಚುವರಿ ಪೋಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ಐಕ್ಯಾಟ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಶಾಲಿನಿ ನಲವಾಡ್ ಮುಂತಾದವರು ಇದ್ದರು.