ಬೆಂಗಳೂರು : ಲಾಕ್ಡೌನ್ ಸಂಕಷ್ಟದ ನಡುವೆ ₹ 1250 ಕೋಟಿ ರೂ. ಮೊತ್ತದ ಪ್ಯಾಕೇಜ್ ಉದಾರವಾಗಿ ಘೋಷಿಸಿದೆ ಎಂದು ರಾಜ್ಯ ಸರ್ಕಾರ ಹೇಳಿಕೋಂಡಿರುವುದು ಅತ್ಯಂತ ನಿರಾಸದಾಯಕ, ಇದು ಬಿಎಸ್‌ವೈ ಸರ್ಕಾರ ಮತ್ತೊಂದು ನಾಟಕೀಯ ಪ್ಯಾಕೇಜ್ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸಿಎಂ ಬಿಎಸ್‌ವೈ ಘೋಷಿಸಿದ ಲಾಕ್ಡೌನ್ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕಳೆದ ಬಾರಿ ₹ 1200 ಕೋಟಿ ಪ್ಯಾಕೇಜ್ ಬಿಡುಗಡೆ ಮಾಡಲಾಗಿತ್ತು, ಹೂ ಬೆಳೆಗಾರರ ನಷ್ಟಕ್ಕೆ ಹೆಕ್ಟೇರ್‌ಗೆ ₹ 25 ಸಾವಿರ ಪರಿಹಾರ ನೀಡಿತ್ತು ಈ ಬಾರಿ ₹ 10 ಸಾವಿರಕ್ಕೆ ಇಳಿಕೆ ಮಾಡಿದೆ. ಇದು ಎಕರೆಗೆ ₹ 3.5 ಸಾವಿರವಾಗಲಿದ್ದು ಬೆಲೆ ಏರಿಕೆ ನಡುವೆ ಈ ಪರಿಹಾರ ರೈತರಿಗೆ ಸಾಕಾಗುವುದಿಲ್ಲ ಎಂದು ಹೆಚ್‌ಡಿಕೆ ಹೇಳಿದ್ದಾರೆ.
ಹಣ್ಣು ಮತ್ತು ತರಕಾರಿ ಬೆಳಗಾರರ ಪರಿಸ್ಥಿತಿ ಕೂಡಾ ಇದೆಯಾಗಿದ್ದು ಒಂದು ಕಡೆ ಹಳ್ಳಿಗಳಲ್ಲಿ ಕೊರೊನಾ ಸೋಂಕು ಹರಡಿದ್ದು ಚಿಕಿತ್ಸೆಗೆ ಲಕ್ಷಾಂತರ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮತ್ತೊಂದು ಕಡೆ ಬೆಳೆಯೂ ಮಾರಾಟವಾಗದೇ ಹಾಳಾಗಿದೆ. ಸರ್ಕಾರ ನೀಡುವ ಪ್ಯಾಕೇಜ್ ಸಾಲದೇ ರೈತರು ಸಾಲಗಾರನಾಗುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದಲ್ಲ ಕಾರ್ಮಿಕರ ಕಲ್ಯಾಣ ನಿಧಿಯಿಂದ ಹಣ ನೀಡಲಾಗುತ್ತಿದೆ. ಅಸಂಘಟಿತ ಕಾರ್ಮಿಕರಿಗೆ ಎರಡು ಸಾವಿರ ಘೋಷಣೆ ಮಾಡಿದ್ದು ಇದರಿಂದ ಜೀವನ ಮಾಡಲು ಸಾಧ್ಯವಾ ಎಂದು ಸರ್ಕಾರ ಯೋಚನೆ ಮಾಡಬೇಕಿದೆ. ಸರ್ಕಾರ ಪಡಿತರ ಹಂಚಿಕೆಯಲ್ಲೂ ಸರ್ಕಾರ ರಾಜ್ಯದ ಜನರಿಗೆ ಮೋಸ ಮಾಡಿದೆ. ಏಳು ಕೆಜಿ ಇದ್ದ ಅಕ್ಕಿಯನ್ನು ಎರಡು ಕೆಜಿಗೆ ಇಳಿಕೆ ಇಂದು ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಗೆ ರಾಜ್ಯ ಸರ್ಕಾರ 5 ಅಕ್ಕಿ ಸೇರಿಸಿ ನೀಡುತ್ತಿರುವುದು ಜನರಿಗೆ ಸರ್ಕಾರ ಬಗೆಯುತ್ತಿರುವ ದ್ರೋಹ ಎಂದು ಹೆಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಯ ಪ್ರಜ್ಞೆ ಇಲ್ಲದೇ ಸರ್ಕಾರ ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳದ ಪರಿಣಾಮ ರಾಜ್ಯದಲ್ಲಿ ಸೋಂಕು ವ್ಯಾಪಿಸಿದೆ. ಸರ್ಕಾರ ಜನರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದೆ. ಹಣ ಸಿಎಂ ಕಚೇರಿಯಿಂದ ನೀಡುತ್ತಿಲ್ಲ, ಜನರ ತೆರಿಗೆ ಹಣ ಜನರಿಗೆ ನೀಡಬೇಕು. ನಿಗಮ ಮಂಡಳಿ ಅಧ್ಯಕ್ಷರಿಗೆ ಅನಾವಶ್ಯಕ ಖರ್ಚು ಮಾಡುತ್ತಿರುವ ಹಣ ಕೊರೊನಾಗೆ ಬಳಸಬೇಕು, ಸರ್ಕಾರ ಲೂಟಿ ಮಾಡುವುದು ನಿಲ್ಲಿಸಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿರುವ 55 ಲಕ್ಷ ಶ್ರಮಿಕ ವರ್ಗದ ಕುಟುಂಬಗಳಿಗೆ ಕನಿಷ್ಠ 10,000 ಪರಿಹಾರ ನೀಡಬೇಕು. ಜನರು ಸಂಕಷ್ಟ ಪರಿಸ್ಥಿತಿಯಲ್ಲಿರುವಾಗ ಸರ್ಕಾರ ಜವಬ್ದಾರಿಯಿಂದ ಕೆಲಸ ಮಾಡಬೇಕು. ಜನರ ದುಡ್ಡನ್ನ ಜನರಿಗೆ ನೀಡಬೇಕು ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.