Secular TV
Friday, January 27, 2023
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle
No Result
View All Result
Secular TV
No Result
View All Result

ಆಂಜನೇಯ ಸಹಕಾರ ಸಂಘದ ಅಧ್ಯಕ್ಷನಿಂದ ಪ್ರಧಾನಿ ಹುದ್ದೆವರೆಗೂ – ಇಲ್ಲಿದೆ ಹೆಚ್.ಡಿ ದೇವೇಗೌಡರ ಜೀವನದ ಸಾಧನೆಯ ಹಾದಿ

Secular TVbySecular TV
A A
Reading Time: 3 mins read
ಆಂಜನೇಯ ಸಹಕಾರ ಸಂಘದ ಅಧ್ಯಕ್ಷನಿಂದ ಪ್ರಧಾನಿ ಹುದ್ದೆವರೆಗೂ – ಇಲ್ಲಿದೆ ಹೆಚ್.ಡಿ ದೇವೇಗೌಡರ ಜೀವನದ ಸಾಧನೆಯ ಹಾದಿ
0
SHARES
Share to WhatsappShare on FacebookShare on Twitter

ಬೆಂಗಳೂರು : ದೇಶಕಂಡ ಅಪ್ರತಿಮ ರಾಜಕಾರಣಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಇಂದು 88ನೇ ಜನ್ಮದಿನ. ಕೊರೊನಾ ಹಿನ್ನಲೆಯಲ್ಲಿ ಸರಳವಾಗಿ ದೊಡ್ಡಗೌಡರು ಬೆಂಗಳೂರಿನ ‌ನಿವಾಸದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ‌. ಹೆಚ್.ಡಿ ದೇವೇಗೌಡರ ಜನ್ಮದಿನ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ದೇಶದ ಉನ್ನತ ನಾಯಕರು ಶುಭಾಶಯ ಕೋರುತ್ತಿದ್ದಾರೆ.

ಬಡ ರೈತಾಪಿ ಕುಟುಂಬದಲ್ಲಿ ಜನಿಸಿದ ಹೆಚ್‌.ಡಿ ದೇವೇಗೌಡರು ಪ್ರಧಾನಿಮಂತ್ರಿ ಹುದ್ದೆವರೆಗೂ ನಡೆಸಿದ ಪ್ರಯಾಣ ಅತ್ಯದ್ಭುತ. ರಾಜಕೀಯ ಪರ – ವಿರೋಧದ ಚರ್ಚೆಗಳು ಏನೇ ಇದ್ದರು ವೈಯಕ್ತಿಕವಾಗಿ ದೇವೇಗೌಡರನ್ನು ಗೌರವಿಸುವವರ ಸಂಖ್ಯೆ ಹೆಚ್ಚು. ಇಂದು ಅವರ ಜನ್ಮದಿನದ ಹಿನ್ನಲೆ ಅವರ ಬದುಕಿನ ಪ್ರಮುಖ ಘಟ್ಟಗಳನ್ನು ಇಲ್ಲಿ ಪ್ರಸ್ತುತ ಪಡಿಸಲಾಗುತ್ತಿದೆ.

ಮೇ 18, 1933ರಂದು ಕರ್ನಾಟಕದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಹೆಚ್.ಡಿ ದೇವೇಗೌಡರು ಜನಿಸಿದರು. ದೊಡ್ಡೇಗೌಡ ಮತ್ತು ಶ್ರೀಮತಿ ದೇವಮ್ಮ ಅವರ ಪುತ್ರರಾಗಿ ಸರಳ ಕೃಷಿ ಕುಟುಂಬದಲ್ಲಿ ದೇವೇಗೌಡರ ಜನನವಾಗಿತ್ತು.

ಸಿವಿಲ್ ಎಂಜಿನಿಯರಿಂದ ಡಿಪ್ಲೊಮಾ ಪಡೆದಿರುವ ದೇವೇಗೌಡರು 20 ವರ್ಷದ ಯುವಕನಾಗಿದ್ದಾಗಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. ಶಿಕ್ಷಣ ಪೂರೈಸಿದ ನಂತರ 1953ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ 1962ರ ತನಕ ಆ ಪಕ್ಷದಲ್ಲೇ ಸದಸ್ಯರಾಗಿ ಉಳಿದಿದ್ದರು. ಮಧ್ಯಮ ವರ್ಗದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಗೌಡರಿಗೆ ರೈತನ ಬದುಕಿನ ಕಷ್ಟಗಳು ಚೆನ್ನಾಗಿ ತಿಳಿದಿದ್ದವು. ಯುವ ಗೌಡರು, ಬಡ ರೈತರು, ಸೌಲಭ್ಯ ವಂಚಿತರು ಹಾಗೂ ಸಮಾಜದ ದುರ್ಬಲ ವರ್ಗಗಳ ಒಳಿತಿಗಾಗಿ ತಾವೊಬ್ಬ ಹೋರಾಟಗಾರನಾಗುವುದಾಗಿ ಘೋಷಿಸಿದ್ದರು.

ಪ್ರಜಾಸತ್ತಾತ್ಮಕ ವ್ಯವಸ್ಥೆಯ ಕೆಳ ಸ್ತರದಿಂದ ಆರಂಭಿಸಿದ ಇವರ ಹೋರಾಟದ ಬದುಕು ರಾಜಕೀಯ ರಂಗದಲ್ಲಿ ಹಂತ ಹಂತವಾಗಿ ಮೇಲೇರಿತು. ಆಂಜನೇಯ ಸಹಕಾರ ಸಂಘದ ಅಧ್ಯಕ್ಷರಾಗಿ ಇವರು ಸೇವೆ ಸಲ್ಲಿಸುತ್ತಿದ್ದಾಗಲೇ ಬಡಜನರ ಸೇವೆಯಲ್ಲಿ ಹೆಸರಾಗಿದ್ದರು. ನಂತರ ಇವರು ಹೊಳೆನರಸೀಪುರ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾದರು.

ಸಮಾಜದಲ್ಲಿನ ಅಸಮಾನತೆಗಳನ್ನು ಸರಿಪಡಿಸುವ ಆಶಯದೊಂದಿಗೆ ಸದಾ ಆದರ್ಶ ರಾಜ್ಯವೊಂದರ ಕನಸು ಕಾಣುತ್ತಿದ್ದರು. ಕೇವಲ 28 ವರ್ಷಗಳಿದ್ದಾಗ ಯುವ ದೇವೇಗೌಡರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಹಾಗೂ 1962ರಲ್ಲಿ ಕರ್ನಾಟಕ ವಿಧಾನಸಭೆ ಸದಸ್ಯನಾಗಿ ಆಯ್ಕೆಯಾದ ದಿನದಿಂದ ಇವರು ಯಶಸ್ಸಿನ ಓಟದಲ್ಲೇ ಮುಂದುವರೆದರು. ವಿಧಾನಸಭೆಯಲ್ಲಿ ಪರಿಣಾಮಕಾರಿ ಭಾಷಣಗಾರರಾದ ಇವರು ತನ್ನ ಹಿರಿಯರು ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹೊಳೆನರಸೀಪುರ ಕ್ಷೇತ್ರದಿಂದ ಸತತ ಮೂರು ಬಾರಿ ಅಂದರೆ ನಾಲ್ಕನೇ (1967-71), ಐದನೇ (1972-77) ಹಾಗೂ ಆರನೇ (1978-83) ವಿಧಾನಸಭೆಗಳಿಗೆ ಚುನಾಯಿತರಾದರು. ಇವರು ಮಾರ್ಚ್ 1972 ರಿಂದ ಮಾರ್ಚ್ 1976 ಹಾಗೂ ನವೆಂಬರ್ 1976 ರಿಂದ ಡಿಸೆಂಬರ್ 1977ರವರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿ ಮೆಚ್ಚುಗೆಗೆ ಪಾತ್ರರಾದರು.

ದೇವೇಗೌಡರು ನವೆಂಬರ್ 22, 1982ರಂದು ಆರನೇ ವಿಧಾನಸಭೆಯ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಏಳನೇ ಮತ್ತು ಎಂಟನೇ ವಿಧಾನಸಭೆಯ ಸದಸ್ಯರಾಗಿ, ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದರು. ನೀರಾವರಿ ಸಚಿವರಾಗಿದ್ದ ಅವರ ಅವಧಿಯಲ್ಲಿ ಅನೇಕ ನೀರಾವರಿ ಯೋಜನೆಗಳು ಅನುಷ್ಠಾನಗೊಂಡವು. ನೀರಾವರಿಗೆ ಸಾಕಷ್ಟು ಹಣಕಾಸು ಮಂಜೂರಾತಿ ನೀಡದಿದ್ದನ್ನು ಪ್ರತಿಭಟಿಸಿ 1987ರಲ್ಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.

ಸ್ವಾತಂತ್ರ್ಯ ಮತ್ತು ಸಮಾನತೆಯ ಹರಿಕಾರರಾದ ಇವರು 1975-76ರಲ್ಲಿ ಕೇಂದ್ರ ಸರ್ಕಾರದ ಮೇಲೆ ಆಕ್ರೋಶಗೊಂಡರು ಹಾಗೂ ತುರ್ತು ಪರಿಸ್ಥಿತಿ ದಿನಗಳಲ್ಲಿ ಜೈಲು ವಾಸ ಅನುಭವಿಸಿದರು. ದೇವೇಗೌಡರು ಈ ಅವಧಿಯಲ್ಲಿ ಹೆಚ್ಚು ಕಾಲ ಓದುವುದರಲ್ಲಿ ತೊಡಗಿ ತಮ್ಮ ಜ್ಞಾನವನ್ನು ಇನ್ನಷ್ಟು ಸಮೃದ್ಧಗೊಳಿಸಿದರು. ನಿರಂತರ ಓದುವಿಕೆ ಹಾಗೂ ಆ ಅವಧಿಯಲ್ಲಿ ಕಾರಾಗೃಹದಲ್ಲಿದ್ದ ಭಾರತೀಯ ರಾಜಕಾರಣದ ಇತರ ಮುತ್ಸದ್ದಿಗಳ ಜೊತೆ ಒಡನಾಟವು ಅವರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನೆರವಾಯಿತು. ಬಂಧಮುಕ್ತರಾದ ನಂತರ ಅವರು ದೃಢ ವ್ಯಕ್ತಿಯಾಗಿ ಹೊರ ಹೊಮ್ಮಿದರು.

1991ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸತ್ ಗೆ ಆಯ್ಕೆಯಾದ ಅವರು ವಿಶೇಷವಾಗಿ ರೈತರು ಒಳಗೊಂಡಂತೆ ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದರು. ಸಂಸತ್ ನಲ್ಲಿ ರೈತರ ಬವಣೆ ಮತ್ತು ಸಂಕಷ್ಟಗಳ ಮೇಲೆ ಬೆಳಕು ಚೆಲ್ಲಿ ಕೃಷಿಕರ ದನಿಯಾದರು. ಸಂಸತ್ ಮತ್ತು ಅದರ ಸಂಸ್ಥೆಗಳ ಘನತೆ ಮತ್ತು ಗೌರವಗಳನ್ನು ಎತ್ತಿ ಹಿಡಿಯುವಲ್ಲಿಯೂ ಸಹ ಇವರು ಹೆಸರು ಮಾಡಿದರು.

ದೇವೇಗೌಡರು ರಾಜ್ಯ ಮಟ್ಟದಲ್ಲಿ ಎರಡು ಬಾರಿ ಜನತಾ ಪಕ್ಷದ ಅಧ್ಯಕ್ಷರು ಹಾಗೂ 1994ರಲ್ಲಿ ರಾಜ್ಯ ಜನತಾದಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 1994ರಲ್ಲಿ ರಾಜ್ಯದಲ್ಲಿ ಜನತಾದಳವು ಅಧಿಕಾರಕ್ಕೆ ಬರುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದರು. ಡಿಸೆಂಬರ್ 11, 1994ರಂದು ಇವರು ಜನತಾದಳ ಶಾಸಕಾಂಗ ಪಕ್ಷದ ನಾಯಕರಾಇ ಆಯ್ಕೆಯಾಗಿ ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆನಂತರ ಇವರು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ತಮ್ಮ ಸಕ್ರಿಯ ರಾಜಕಾರಣ ಮತ್ತು ಬೇರುಮಟ್ಟದ ಭದ್ರ ಬುನಾದಿಯಿಂದಾಗಿ ರಾಜ್ಯ ಎದುರಿಸುತ್ತಿದ್ದ ಅನೇಕ ಸಮಸ್ಯೆಗಳನ್ನು ನಿಭಾಯಿಸುವ ಹೊಣೆಯನ್ನು ನೇರವಾಗಿ ಕೈಗೆತ್ತಿಕೊಂಡರು. ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವನ್ನು ಮುಂಚೂಣಿಗೆ ತಂದಾಗ ಅವರ ರಾಜಕೀಯ ಕುಶಾಗ್ರಮತಿ ಮತ್ತೊಮ್ಮೆ ಪರೀಕ್ಷೆಗೆ ಒಳಪಟ್ಟಿತು. ಇದು ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಮೈದಾನವಾಗಿದ್ದು, ರಾಜಕೀಯ ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ಶ್ರೀ ಗೌಡರು ಈ ವಿವಾದಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು.

ಜನವರಿ 1995ರಲ್ಲಿ ದೇವೇಗೌಡರು ಸ್ವಿಟ್ಜರ್ಲೆಂಡ್ಗೆ ಪ್ರವಾಸ ಕೈಗೊಂಡು, ಅಂತಾರಾಷ್ಟ್ರೀಯ ಆರ್ಥಿಕ ತಜ್ಞರ ಸಮಾವೇಶದಲ್ಲಿ ಪಾಲ್ಗೊಂಡರು. ಯುರೋಪ್ ಮತ್ತು ಮಧ್ಯಪೂರ್ವ ರಾಷ್ಟ್ರಗಳಿಗೆ ಇವರು ಕೈಗೊಂಡ ಪ್ರವಾಸವು ಓರ್ವ ಸಮರ್ಪಣಾ ಮನೋಭಾವ ರಾಜಕಾರಣಿಯ ಸಾಧನೆಗಳಿಗೆ ಸಾಕ್ಷಿಯಾಗುತ್ತದೆ. ಅವರ ಸಿಂಗಾಪುರ ಪ್ರವಾಸವು ರಾಜ್ಯಕ್ಕೆ ತುಂಬಾ ಅಗತ್ಯವಾದ ವಿದೇಶಿ ಬಂಡವಾಳವನ್ನು ತರುವಲ್ಲಿ ಯಶಸ್ವಿಯಾಗಿದ್ದು, ಅದು ಅವರ ವ್ಯವಹಾರಿಕ ಜಾಣ್ಮೆಯನ್ನು ಸಾಬೀತುಪಡಿಸುತ್ತದೆ.

1989ರಲ್ಲಿ ಜನತಾ ಪಕ್ಷದ ಅವರ ಸಮೂಹವು ಕರ್ನಾಟಕದಲ್ಲಿ ತಾನು ಸ್ಪರ್ಧಿಸಿದ 222 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಗೆದ್ದು ಅತ್ಯಂತ ಕಳಪೆ ಸಾಧನೆ ಮಾಡಿತು. ದೇವೇಗೌಡರು ತಾವು ಸ್ಪರ್ಧಿಸಿದ ಎರಡು ಕ್ಷೇತ್ರಗಳಲ್ಲಿ ಪರಾಭವಗೊಂಡು ತಮ್ಮ ರಾಜಕೀಯ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಸೋಲಿನ ರುಚಿ ಕಂಡರು.

ಈ ಹೀನಾಯ ಪರಾಭವು ಅವರನ್ನು ಮೊನಚಾದ ತುದಿಗೆ ಕೊಂಡ್ಯೊಯಿತು. ಕಳೆದ ಹೋದ ಘನತೆ, ಗೌರವ ಮತ್ತು ಶಕ್ತಿಯನ್ನು ಮತ್ತೆ ಗಳಿಸಲು ಅವರು ಅಪಾರ ಪರಿಶ್ರಮ ಪಡಬೇಕಾಯಿತು. ತಮ್ಮದೇ ಶೈಲಿಯ ರಾಜಕಾರಣವನ್ನು ಅವರು ಮರು ಪರೀಕ್ಷಿಸಿಕೊಳ್ಳುವಂತೆ ಅವರನ್ನು ಪ್ರಚೋದಿಸಿತು. ಅವರು ಕರ್ನಾಟಕ ಮತ್ತು ದೆಹಲಿಯಲ್ಲಿ ಸ್ನೇಹಿತರನ್ನು ಗಳಿಸಿದರು. ರಾಜಕೀಯ ವೈರಿಗಳೊಂದಿಗೆ ತನ್ನ ಹಳೆ ಹಗೆತನವನ್ನು ಬದಿಗಿಟ್ಟರು. ದೇವೇಗೌಡರು ಸರಳ, ನೇರ ನಡೆ ನುಡಿಗೆ ಹೆಸರಾದವರು. ತಾವು ಸರಳವಾಗಿದ್ದರೂ ಅದು ಸದೃಢ ಮತ್ತು ಪರಿಣಾಮಕಾರಿಯಾದಂಥ ಜೀವನ ಶೈಲಿಯನ್ನು ಹೊಂದಿರುವ ವ್ಯಕ್ತಿ ಎನಿಸಿದ್ದಾರೆ.

ರಾಜಕೀಯ ಪ್ರವೇಶಕ್ಕೂ ಮುನ್ನ, ದೇವೇಗೌಡರು ಗುತ್ತಿಗೆದಾರರಾಗಿದ್ದು, ಸಣ್ಣ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದರು. ಸ್ವತಂತ್ರರಾಗಿ ಏಳು ವರ್ಷಗಳ ಕಾಲ ಕಳೆದ ಇವರಿಗೆ ಹೊರಗಿನಿಂದ ಪಕ್ಷದ ರಾಜಕೀಯವನ್ನು ವೀಕ್ಷಿಸಲು ನೆರವಾಯಿತು. ಸದಾ ಚಟುವಟಿಕೆಯಿಂದ ಇರುತ್ತಿದ್ದ ಅವರು ಶಾಸನಸಭೆಯ ಗ್ರಂಥಾಲಯದಲ್ಲಿ ಪುಸ್ತಕಗಳು ಮತ್ತು ನಿಯತಕಾಲಿಕಗಳನ್ನು ತಿರುವಿ ಹಾಕುತ್ತಿದ್ದರು.

1967ರಲ್ಲಿ ನಡೆದ ಮರು ಚುನಾವಣೆ ಅವರಿಗೆ ಹೆಚ್ಚು ವಿಶ್ವಾಸ ನೀಡಿತು ಹಾಗೂ 1969ರಲ್ಲಿ ಕಾಂಗ್ರೆಸ್ ಪಕ್ಷವು ಇಬ್ಭಾಗವಾದಾಗ, ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್ (ಒ) ಪಕ್ಷವನ್ನು ಸೇರಿದರು. ಆದ ಆ ಪಕ್ಷ ಕರ್ನಾಟಕದಲ್ಲಿ ಅಧಿಕಾರದಲ್ಲಿತ್ತು. ಆದರೆ, ಗೌಡರು 1971ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (ಒ) ಪಕ್ಷದ ಗೆಲುವಿನ ಬಳಿಕದ ಅವರಿಗೆ ಒಂದು ದೊಡ್ಡ ಅವಕಾಶ ಒದಗಿ ಬಂದಿತು. ಇಂದಿರಾಗಾಂಧಿ ಅವರ ಅಲೆಯನ್ನು ಮೊಟಕುಗೊಳಿಸುವ ಪ್ರತಿಪಕ್ಷದ ಓರ್ವ ನಾಯಕರಾಗಿ ಇವರು ಹೊರಹೊಮ್ಮಿದರು.

ತಾವು ಬಯಸದೇ ಇದ್ದರೂ ದೇವೇಗೌಡರಿಗೆ ತೃತೀಯ ರಂಗದ (ಪ್ರಾದೇಶಿಕ ಪಕ್ಷಗಳು ಹಾಗೂ ಕಾಂಗ್ರೆಸ್ಸೇತರ ಮತ್ತು ಬಿಜೆಪಿಯೇತರ ಸಂಯೋಜನೆ) ನಾಯಕತ್ವ ವಹಿಸಲು ಮತ್ತು ಪ್ರಧಾನಮಂತ್ರಿ ಗದ್ದುಗೆಗೇರುವ ಅವಕಾಶ ಒದಗಿ ಬಂದಿತು. ಭಾರತದ 11ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮೇ 30, 1996ರಂದು ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ದೇವೇಗೌಡರು ರಾಜೀನಾಮೆ ನೀಡಿದರು.

2014 ರಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆ ಸದಸ್ಯರಾಗಿದ್ದ ದೇವೇಗೌಡರು 2019 ರ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರವನ್ನು‌ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟು ಕೊಟ್ಟು, ಕಾಂಗ್ರೆಸ್ ಜೊತೆಗೆ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ತುಮಕೂರಿನಿಂದ ಕಣಕ್ಕಿಳಿದು ಸೋಲನ್ನಪ್ಪಿದ್ದರು‌. ಸದ್ಯ ಈಗ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

RECOMMENDED

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

January 27, 2023
Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

January 27, 2023
  • 409 Followers
  • 23.7k Followers

MOST VIEWED

  • Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    Relationship: ನಿಮ್ಮ ಹುಡುಗ ವರ್ಜಿನ್ ಅನ್ನೋದನ್ನ ಹೀಗೆ ಮೊದಲ ರಾತ್ರಿಯಲ್ಲಿಯೇ ತಿಳಿದುಕೊಳ್ಳಿ !

    0 shares
    Share 0 Tweet 0
  • Hunsur Crime : ಸೊಸೆಯನ್ನೇ ಮಂಚಕ್ಕೆ ಕರೆದ ನೀಚ ಮಾವ..!

    0 shares
    Share 0 Tweet 0
  • Lifestyle: ಸಂಗಾತಿ ಜೊತೆ ಸುಂದರ ರಾತ್ರಿ ಕಳೆಯಬೇಕಾ? ಈ ಟಿಪ್ಸ್ ಫಾಲೋ ಮಾಡಿ

    0 shares
    Share 0 Tweet 0
  • Seetharam: ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ ; ‘ಕೈ’ಗೆ ಸೀತಾರಾಮ್ ಗುಡ್ ಬೈ..?

    0 shares
    Share 0 Tweet 0
  • Break-Up: ಪುರುಷರೇ ಎಚ್ಚರ ಎಚ್ಚರ; ಈ ಕಾರಣಗಳಿಂದಲೇ ದೂರವಾಗ್ತಾಳೆ ಪತ್ನಿ

    0 shares
    Share 0 Tweet 0

Related Posts

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ
Entertainment

ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ- ನಾಳೆಯಿಂದ ಚಿತ್ರೀಕರಣ ಆರಂಭ

January 27, 2023
Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ
Entertainment

Kranti Release: ಸಾಮಾಜಿಕ ಕಳಕಳಿ ಹೊತ್ತ ‘ಕ್ರಾಂತಿ’ ಅದ್ಧೂರಿ ಬಿಡುಗಡೆ

January 27, 2023
PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!
Entertainment

PHOTO GALLERY: ಕ್ರಿಕೆಟಿಗ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ  ಬ್ಯೂಟಿಫುಲ್ ಮದುವೆ ಫೋಟೋಗಳು…!

January 27, 2023
ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ
Karnataka

ವೈದ್ಯಾಧಿಕಾರಿ ಡಾ. ಮಮತಾ ಅವರಿಗೆ ವರ್ಷದ ವ್ಯಕ್ತಿ ಪ್ರಶಸ್ತಿ

January 27, 2023
ಭಾರತದಲ್ಲಿ ಶೇ.6ರಷ್ಟು ಜನ ವಿಶೇಷ ಚೇತನರು : ದಿವ್ಯಾ ಎಸ್ ಹೊಸೂರ್
Bangalore

ಭಾರತದಲ್ಲಿ ಶೇ.6ರಷ್ಟು ಜನ ವಿಶೇಷ ಚೇತನರು : ದಿವ್ಯಾ ಎಸ್ ಹೊಸೂರ್

January 26, 2023
Darshan Thogudeepa: ದರ್ಶನ್ ಮೇಲೆ ಶೂ ಎಸೆದ್ರು ನುಗುತ್ತಲೇ ‘ತಪ್ಪೇನು ಇಲ್ಲ ಚಿನ್ನ..ಪರವಾಗಿಲ್ಲ ಬಿಡ್ರೊ’ ಎಂದ ಯಜಮಾನ..! : ದಾಸನ ಮಾತಿಗೆ ತಲೆಬಾಗಿದ ಫ್ಯಾನ್ಸ್..!
Entertainment

Darshan Thogudeepa: ದರ್ಶನ್ ಮೇಲೆ ಶೂ ಎಸೆದ್ರು ನುಗುತ್ತಲೇ ‘ತಪ್ಪೇನು ಇಲ್ಲ ಚಿನ್ನ..ಪರವಾಗಿಲ್ಲ ಬಿಡ್ರೊ’ ಎಂದ ಯಜಮಾನ..! : ದಾಸನ ಮಾತಿಗೆ ತಲೆಬಾಗಿದ ಫ್ಯಾನ್ಸ್..!

December 19, 2022
Just Pass Cinema: ಸೆಟ್ಟೇರಿದ ಶ್ರೀ ‘ಜಸ್ಟ್ ಪಾಸ್’ ಸಿನಿಮಾ – ಜನವರಿ 2ರಿಂದ ಚಿತ್ರೀಕರಣ
Entertainment

Just Pass Cinema: ಸೆಟ್ಟೇರಿದ ಶ್ರೀ ‘ಜಸ್ಟ್ ಪಾಸ್’ ಸಿನಿಮಾ – ಜನವರಿ 2ರಿಂದ ಚಿತ್ರೀಕರಣ

December 15, 2022
BJP Government: ವರ್ಗಾವಣೆಯಲ್ಲಿ ಬಿಜೆಪಿ ಕುತಂತ್ರ: ಚುನಾವಣಾ ಆಯೋಗದ ಮೊರೆ ಹೋದ ಎಎಪಿ
Uncategorized

BJP Government: ವರ್ಗಾವಣೆಯಲ್ಲಿ ಬಿಜೆಪಿ ಕುತಂತ್ರ: ಚುನಾವಣಾ ಆಯೋಗದ ಮೊರೆ ಹೋದ ಎಎಪಿ

December 14, 2022
Next Post
ಪೋಷಕರ ಕಳೆದುಕೊಂಡ ಮಕ್ಕಳಿಗೆ ಮಾಶಾಸನ, ಕೊರೊನಾದಿಂದ ಮೃತ ಕುಟುಂಬಕ್ಕೆ 50 ಸಾವಿರ‌ ಪರಿಹಾರ

ಪೋಷಕರ ಕಳೆದುಕೊಂಡ ಮಕ್ಕಳಿಗೆ ಮಾಶಾಸನ, ಕೊರೊನಾದಿಂದ ಮೃತ ಕುಟುಂಬಕ್ಕೆ 50 ಸಾವಿರ‌ ಪರಿಹಾರ

ಪ್ಲಾಸ್ಮಾ ಬಳಿಕ ಕೊರೊನಾ ಚಿಕಿತ್ಸಾ ಪಟ್ಟಿಯಿಂದ ರೆಮ್ಡೆಸಿವಿರ್ ಔಟ್ ?

ಪ್ಲಾಸ್ಮಾ ಬಳಿಕ ಕೊರೊನಾ ಚಿಕಿತ್ಸಾ ಪಟ್ಟಿಯಿಂದ ರೆಮ್ಡೆಸಿವಿರ್ ಔಟ್ ?

No Result
View All Result
  • Just-In
  • Karnataka
  • Bangalore
  • Politics
  • Secular Special
  • Crime
  • Entertainment
  • Lifestyle

© 2022 Secular Tv - Secular TV Secular Tv.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist