ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೇ 24ರ ವರೆಗೂ ಲಾಕ್ಡೌನ್ ವಿಸ್ತರಣೆಯಾಗಿದ್ದು ಈ ಹಿನ್ನಲೆ ವಿಶೇಷ ಪ್ಯಾಕೇಜ್‌ವೊಂದನ್ನು ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಎರಡನೇ ಬಾರಿ ಪ್ಯಾಕೇಜ್ ಘೋಷಣೆ ಮಾಡುತ್ತಿರುವ ಅವರು, ಈ ಬಾರಿ ನಾಲ್ಕು ಪ್ರಮುಖ ಅಂಶಗಳಿಗೆ ಆದ್ಯತೆಯನ್ನು ನೀಡಿದ್ದಾರೆ.
ಕೊರೊನಾದಿಂದ ಪೋಷಕರನ್ನ ಕಳೆದುಕೊಂಡ ಮಕ್ಕಳಿಗೆ 25 ವರ್ಷ ವಯಸ್ಸಿನವರೆಗೂ ಮಾಸಿಕ 2500 ಮಾಶಾಸನದ ಜೊತೆಗೆ ಉಚಿತ ಶಿಕ್ಷಣ ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.
Families where the breadwinner died, will be given Rs 2500 monthly pension besides the ex-gratia. If husband dies, pension will be given to the wife, if wife dies it will be given to the husband. If an unmarried person dies, the pension will be given to his/her parents: Delhi CM
— ANI (@ANI) May 18, 2021
ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವ ರೋಗಿಗಳ ಕುಟುಂಬಕ್ಕೆ 50,000 ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಇದರ ಜೊತೆಗೆ ಕೊರೊನಾದಿಂದಾಗಿ ಪತಿ ಸಾವನ್ನಪ್ಪಿದರೇ ಪತ್ನಿಗೆ, ಪತ್ನಿ ಸಾವನ್ನಪ್ಪಿದರೇ ಪತಿಗೆ ಮತ್ತು ಅವಿವಾಹಿತ ಯುವಕ ಅಥಾವ ಯುವತಿ ಸಾವನ್ನಪ್ಪಿದಲ್ಲಿ ಪೊಷಕರಿಗೆ ಪಿಂಚಣಿ ನೀಡಲು ದೆಹಲಿ ಸರ್ಕಾರ ನಿರ್ಧರಿಸಿದೆ.
There are 72 lakh ration card holders in Delhi & they're given 5 kg ration by the govt every month. This month, ration will be given free of cost. Besides this, addl 5 kg free ration is being given by the Central Govt. So they're being given 10 kg free ration this month: Delhi CM pic.twitter.com/tNLqpMJxCa
— ANI (@ANI) May 18, 2021
ಇನ್ನು ಎರಡು ತಿಂಗಳು ಉಚಿತ ಪಡಿತರ ನೀಡಲು ತಿರ್ಮಾನಿಸಿದ್ದು ದೆಹಲಿಯಲ್ಲಿರುವ 72 ಲಕ್ಷ ಪಡಿತರ ಕಾರ್ಡುಗಳಿಗೆ ಸಂಪೂರ್ಣ ಉಚಿತ ರೇಷನ್ ಸರ್ಕಾರ ಪ್ಯಾಕೇಜ್ ಅಡಿಯಲ್ಲಿ ನೀಡಲಿದೆ. ಇದನ್ನು ಮುನ್ನ ಒಂದು ಪ್ಯಾಕೇಜ್ ಘೋಷಿಸಿದ್ದ ಅರವಿಂದ ಕೇಜ್ರಿವಾಲ್, ಆಟೋ ಕ್ಯಾಬ್ ಚಾಲಕರಿಗೆ ತಿಂಗಳಿಗೆ 5000 ನೀಡಿದ್ದರು.