ಮೆಕ್ಸಿಕೊ : ಮಿಸ್ ಯೂನಿವರ್ಸ್ ಸೌಂದರ್ಯ ಸ್ಪರ್ಧೆಯ 2020ರ ಆವೃತ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಿದ 22 ವರ್ಷದ ಎಡ್ಲಿನ್ ಕ್ವಾಡ್ರೋಸ್ ಕ್ಯಾಸ್ಟೆಲಿನೊ, ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸುವ ಮೂಲಕ ಭಾರತಕ್ಕೆ ಗೌರವ ತಂದುಕೊಟ್ಟಿದ್ದಾರೆ.

ಫ್ಲೋರಿಡಾದ ಹಾಲಿವುಡ್‌ನ ಸೆಮಿನೋಲ್ ಹಾರ್ಡ್ ರಾಕ್ ಹೋಟೆಲ್ ಮತ್ತು ಕ್ಯಾಸಿನೊದಲ್ಲಿ ಈ ಪ್ರತಿಷ್ಠಿತ ಸ್ಪರ್ಧೆಯನ್ನು ನಡೆಸಲಾಗಿತ್ತು. ಭಾರತದ ಎಡ್ಲಿನ್ ಕ್ವಾಡ್ರೋಸ್ ಕ್ಯಾಸ್ಟೆಲಿನೊ ಸೇರಿದಂತೆ ವಿಶ್ವ ಹಲವು ದೇಶಗಳಿಂದ ಬಂದಿದ್ದ ಸುಂದರ ಮತ್ತು ಪ್ರತಿಭಾವಂತ ಯುವತಿಯರು ಈ ಸ್ಪರ್ಧೆಯಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದ್ದರು.

ಎಡ್ಲಿನ್ ಮೂಲತಃ ಕುವೈತ್ ಮೂಲದವರು, ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದ ಅವರು, ತಮ್ಮನ್ನು ಸ್ವಾವಲಂಬಿಯನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ ಭಾರತಕ್ಕೆ ಬರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಮಿಸ್ ಯೂನಿವರ್ಸ್ 2020 ಗೆ ಸ್ಪರ್ಧೆಗೂ ಮುನ್ನ ಲಿವಾ ಮಿಸ್ ದೇವಾ ಯೂನಿವರ್ಸ್ 2020 ಪ್ರಶಸ್ತಿಗೆ ಎಡ್ಲಿನ್ ಕ್ವಾಡ್ರೋಸ್ ಕ್ಯಾಸ್ಟೆಲಿನೊ ಭಾಜನರಾಗಿದ್ದರು.

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಎಡ್ಲಿನ್, ಕುವೈತ್‌ನಲ್ಲಿ ಬೆಳೆಯುತ್ತಿರುವಾಗ ಅಲ್ಲಿ ಯಾವುದೇ ಮಾನ್ಯತೆ ಇರಲಿಲ್ಲ ನಾನು ಯಾವಾಗಲೂ ಮಿಸ್ ಯೂನಿವರ್ಸ್ ಪ್ಲಾಟ್‌ಫಾರ್ಮ್ ಎದುರು ನೋಡುತ್ತಿದ್ದೆ, ನನ್ನಂತಹ ಹುಡುಗಿ ಇಂತಹ ಪ್ರತಿಷ್ಠಿತ ವೇದಿಕೆಯಲ್ಲಿ ನನ್ನ ದೇಶವನ್ನು ಪ್ರತಿನಿಧಿಸುತ್ತೇನೆ ಎಂದು ಭಾವಿಸರಲಿಲ್ಲ ಎಂದು ಹೇಳಿದ್ದಾರೆ.

ನಟನಾ ಕ್ಷೇತ್ರಕ್ಕೆ ಬರುವ ಬಗ್ಗೆ ಮಾತನಾಡಿರುವ ಆಡ್ಲಿನ್ ನಾನು ನಟನಾ ಪ್ರಸ್ತಾಪವನ್ನು ತಿರಸ್ಕರಿಸುವುದಿಲ್ಲ ಆದರೆ ಬ್ಯುಸಿನೆಸ್ ವಿದ್ಯಾರ್ಥಿನಿ ಆಗಿರುವ ಹಿನ್ನೆಲೆ ಆ ಕ್ಷೇತ್ರದ ಮೇಲೆ ಹೆಚ್ಚು ಒಲವಿದೆ. ಆದರೆ ನನ್ನ ಭವಿಷ್ಯವು ಏನಿದೆ ಎಂಬುದನ್ನು ನೋಡೋಣ ಎಂದಿದ್ದಾರೆ.

ಎಡ್ಲಿನ್ ಕ್ವಾಡ್ರೋಸ್ ಕ್ಯಾಸ್ಟೆಲಿನೊ, ಹುಟ್ಟಿ ಬೆಳೆದಿದ್ದು ಕುವೈತ್ ನಲ್ಲಾದರೂ ಸದ್ಯ ಭಾರತದಲ್ಲಿ ನೆಲೆಸಿದ್ದಾರೆ ಇವರ ಪೊಷಕರು ಕರ್ನಾಟಕ ಮೂಲದವರು ಎನ್ನಲಾಗಿದ್ದು ಕುವೈತ್ ನಲ್ಲಿ ನೆಲೆಸಿ ಬಳಿಕ ವಾಪಸ್ ದೇಶಕ್ಕೆ ವಾಪಸ್ ಆಗಿದ್ದಾರೆ. ಪೊಷಕರ ಬಗ್ಗೆ ಹೆಚ್ಚು ಸಂದರ್ಶನದಲ್ಲಿ ತಿಳಿಸಿಲ್ಲ.
