ಬಾಗಲಕೋಟೆ : ಕೊರೊನಾ ಸಂಕಷ್ಟದಲ್ಲಿರುವ ರೋಗಿಗಳ ಅನುಕೂಲಕ್ಕಾಗಿ ಸ್ವಕ್ಷೇತ್ರ ಬಾದಾಮಿಗೆ ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಮೂರು ಆಂಬ್ಯುಲೆನ್ಸ್‌ಗಳನ್ನು ನೀಡಿದ್ದಾರೆ.
ಇಂದು ಮೂರು ವಾಹನಗಳನ್ನು ತಾಲೂಕು ಆಡಳಿತಕ್ಕೆ ಆಧಿಕಾರಿಗಳ ಮೂಲಕ ಹಸ್ತಾಂತರಿಸಲಾಗಿದ್ದು ಈ ಆಂಬ್ಯುಲೆನ್ಸ್ ಗಳು ಬಾದಾಮಿ ಕ್ಷೇತ್ರದಲ್ಲಿ ಸಂಚರಿಸಿ ರೋಗಿಗಳ ನೆರವಿಗೆ ಧಾವಿಸಲಿವೆ. ಆಂಬ್ಯುಲೆನ್ಸ್ ಜೊತೆಗೆ ವೈದ್ಯರಿಗೆ N95 ಮಾಸ್ಕ್ ಗಳು, ಪಿಪಿಇ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

ಕೊರೊನಾ ಸೋಂಕಿತರ ಅನುಕೂಲಕ್ಕಾಗಿ ಪಕ್ಷದ ವತಿಯಿಂದ ಸಹಾಯವಾಣಿ ಆರಂಭಿಸಲು ಸಿದ್ದರಾಮಯ್ಯ ಅವರು ಮುಖಂಡರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಕೋವಿಡ್ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಳ್ಳುವವರಿಗೆ ಹೆಲ್ಪ್ ಡೆಸ್ಕ್ ಆರಂಭಿಸಲು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಹಶಿಲ್ದಾರ ಸುಹಾಸ ಇಂಗಳೆ,ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಮಲ್ಲನಗೌಡ ಪಾಟೀಲ, ಸಿಪಿಐ ರಮೇಶ ಹಾನಾಪುರ, ಪುರಸಭೆ ಮುಖ್ಯಾಧಿಕಾರಿ ಜ್ಯೋತಿ ಗಿರೀಶ್, ಪಿಎಸ್ಐ ನೇತ್ರಾವತಿ ಪಾಟೀಲ ಮುಖಂಡರಾದ ಹೊಳಬಸು ಶೆಟ್ಟರ, ಮುಚಖಂಡಯ್ಯ ಹಂಗರಗಿ, ಮಹೇಶ ಹೊಸಗೌಡರ, ಪಿ.ಆರ್.ಗೌಡರ,ಬ್ಲಾಕ್ ಕಾಂಗ್ರೆಸ್ ಪಕ್ಷದ ಅದ್ಯಕ್ಷ ಮಲ್ಲಣ್ಣ ಯಲಿಗಾರ, ರಾಜಮಹ್ಮದ ಬಾಗವಾನ

ಪುರಸಭಾ ಅಧ್ಯಕ್ಷ ಮಂಜುನಾಥ ಹೊಸಮನಿ, ಉಪಾಧ್ಯಕ್ಷ ರಾಮವ್ವ ಪೂಜಾರ, ಸದಸ್ಯರಾದ ಪರಶುರಾಮ ರೋಣದ,ಶಂಕರ ಕನಕಗಿರಿ, ಭೀಮಶಿ ಕಂಬಾರ, ರಜಾಕ ರಾಜೋರ,ಸಾಂಬಣ್ಣ ಹೊಸಗೌಡರ, ಶಂಕರಗೌಡ ಗೌಡರ್, ಯೂಸೂಫ್ ಪೀರಜಾದೆ, ಕೆ.ಬಿ.ಗೌಡರ, ಶಿವು ಮಣ್ಣೂರ, ಬೋಜಪ್ಪ ಬೂದಿಹಾಳ, ಇತರ ಮುಖಂಡರು ಭಾಗವಹಿಸಿದ್ದರು.