ನವದೆಹಲಿ : ಕಾಂಗ್ರೆಸ್ ಹಿರಿಯ ನಾಯಕ, ಸಂಸದ ರಾಹುಲ್ ಗಾಂಧಿ ತಮ್ಮನ್ನು ಬಂಧಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಟ್ವಿಟರ್‌ನಲ್ಲಿ ಪೊಸ್ಟ್ ಹಾಕುವುದರ ಮೂಲಕ ಕೇಂದ್ರಕ್ಕೆ ರಾಹುಲ್ ಗಾಂಧಿ ಚಾಲೆಂಜ್ ಹಾಕಿದ್ದಾರೆ.
“ಮೋದಿ ಜೀ ನಮ್ಮ ಮಕ್ಕಳ ವ್ಯಾಕ್ಸಿನ್ ವಿದೇಶಕ್ಕೆ ಯಾಕೆ ಕಳುಹಿಸಿದಿರಿ” ಎನ್ನುವ ಪೊಸ್ಟ್ ಹಾಕಿರುವ ರಾಹುಲ್ ಗಾಂಧಿ ನನ್ನನ್ನೂ ಬಂಧಿಸಿ ಎಂದು ಬರೆದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
Arrest me too.
— Rahul Gandhi (@RahulGandhi) May 16, 2021
मुझे भी गिरफ़्तार करो। pic.twitter.com/eZWp2NYysZ
ಕೋವಿಡ್ ವ್ಯಾಕ್ಸಿನ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ ಪೋಸ್ಟರ್‌ಗಳನ್ನು ಅಂಟಿಸಿದ ಆರೋಪದ ಮೇಲೆ ದೆಹಲಿ ಪೊಲೀಸರು 17 ಎಫ್‌ಐಆರ್ ದಾಖಲಿಸಿ 15 ಜನರನ್ನು ಶನಿವಾರ ಬಂಧಿಸಿದ್ದರು. ಈ ಘಟನೆ ಬಳಿಕ ಟ್ವಿಟರ್‌ನಲ್ಲಿ ನನ್ನನ್ನೂ ಬಂಧಿಸಿ ಅಭಿಯಾನ ಆರಂಭವಾಗಿದೆ.

ದೆಹಲಿಯ ಹಲವು ಭಾಗಗಳಲ್ಲಿ ಮೋದಿ ಜೀ ನಮ್ಮಮಕ್ಕಳ ವ್ಯಾಕ್ಸಿನ್ ವಿದೇಶಕ್ಕೆ ಯಾಕೆ ನೀಡಿದಿರಿ ಎಂದು ಪ್ರಶ್ನಿಸಲಾದ ಪೊಸ್ಟರ್‌ಗಳನ್ನು ಅಂಟಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸೆಕ್ಷನ್ 188 ( ಸಾರ್ವಜನಿಕ ಸೇವಕರಿಂದ ಘೋಷಿಸಲ್ಪಟ್ಟ ಆದೇಶಕ್ಕೆ ಅಸಹಕಾರ) ರ ಅಡಿ ದೆಹಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.