ನವದೆಹಲಿ : ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್ಡೌನ್ ವಿಸ್ತರಣೆ ಮಾಡುತ್ತಿರುವುದಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದು, ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಲ್ಕನೇ ವಾರಕ್ಕೆ ವಿಸ್ತರಣೆಯಾಗಿದೆ ವಿಸ್ತರಣೆಯಾಗಿದೆ.
ಎಪ್ರೀಲ್ 19 ರಿಂದ ದೆಹಲಿಯಲ್ಲಿ ಲಾಕ್ಡೌನ್ ನಿಯಮಗಳನ್ನು ಜಾರಿ ತರಲಾಗಿದ್ದು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
We are extending the lockdown by one more week in Delhi: Delhi Chief Minister Arvind Kejriwal pic.twitter.com/WYrgyquUfZ
— ANI (@ANI) May 16, 2021
ಲಾಕ್ಡೌನ್ ಪರಿಣಾಮದಿಂದ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆ. ಎಪ್ರೀಲ್ 19 ಸಮಯದಲ್ಲಿ ನಿತ್ಯ ಸುಮಾರು 24000 ಮಂದಿಗೆ ಸೋಂಕು ಕಾಣಿಸಿಕೊಂಡರೆ 400 ಮಂದಿ ಸಾವನ್ನಪ್ಪುತ್ತಿದ್ದರು. ಮೂರು ವಾರಗಳ ಲಾಕ್ಡೌನ್ ಬಳಿಕ ನಿತ್ಯ ಸೋಂಕಿತರ ಸಂಖ್ಯೆ 6000 ಇಳಿಕೆಯಾಗಿದ್ದು ಸಾವಿನ ಸಂಖ್ಯೆಯಲ್ಲಿ ಬದಲಾವಣೆಗಳಾಗಿಲ್ಲ.
ಸೋಂಕು ನಿಯಂತ್ರಣ ಬರುವ ಸಂಧರ್ಭದಲ್ಲಿ ಲಾಕ್ಡೌನ್ ನಿಯಮಗಳನ್ನು ಸಡಿಲ ಮಾಡಬಾರದು ಮತ್ತು ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಮತ್ತಷ್ಟು ದಿನಗಳ ಲಾಕ್ಡೌನ್ ಬೇಕು ಎಂದು ತಜ್ಞರು ನೀಡಿದ ಸಲಹೆಯನ್ನು ಆಧರಿಸಿ ಅರವಿಂದ್ ಕೇಜ್ರಿವಾಲ್ ಮತ್ತೊಂದು ವಾರಕ್ಕೆ ಲಾಕ್ಡೌನ್ ವಿಸ್ತರಿಸಿದ್ದು ಮೇ 24 ವರೆಗೂ ಲಾಕ್ಡೌನ್ ನಿಯಮಗಳ ಜಾರಿಯಲ್ಲಿರಲಿದೆ.