ನವದೆಹಲಿ : ಎರಡು ಡೋಸ್ ಲಸಿಕೆ ಪಡೆದ ಬಳಿಕವೂ ಭಾರತದಲ್ಲಿ ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ದೆಹಲಿ ಏಮ್ಸ್ ಆಸ್ಪತ್ರೆ ನಿರ್ದೇಶಕ, ರಾಷ್ಟ್ರೀಯ ಕೊರೊನಾ ಟಾಸ್ಕ್ ಫೋರ್ಸ್ ಸದಸ್ಯ ಡಾ.ರಣದೀಪ್ ಗುಲೇರಿಯಾ ತಿಳಿಸಿದ್ದಾರೆ.
ಎರಡು ಡೋಸ್ ಬಳಿಕ ಅಮೇರಿಕಾದಲ್ಲಿ ಮಾಸ್ಕ್ ಧಾರಣೆ ಕಡ್ಡಾಯವಲ್ಲ ಎಂದು ಅಮೇರಿಕಾ ಅಧ್ಯಕ್ಷ ಜೊ ಬೈಡನ್ ಘೋಷಿಸಿದ ಬೆನ್ನಲೆ ರಣದೀಪ್ ಗುಲೇರಿಯಾ ಈ ಹೇಳಿಕೆ ನೀಡಿದ್ದಾರೆ.
ಅಮೇರಿಕಾ ಮತ್ತು ಭಾರತದಲ್ಲಿ ಹರಡುತ್ತಿರುವ ವೈರಸ್ ನಲ್ಲಿ ವ್ಯತಾಸಗಳಿದೆ. ಭಾರತದಲ್ಲಿ ರೂಪಾಂತರಿ ವೈರಸ್ ತೀವ್ರ ಪರಿಣಾಮಕಾರಿಯಾಗಿದ್ದು ವ್ಯಾಕ್ಸಿನ್ ಪಡೆದ ಬಳಿಕವೂ ಸೋಂಕು ತಗುಲುವ ಸಾಧ್ಯತೆಗಳಿದೆ. ಈ ಹಿನ್ನಲೆ ಎರಡು ಡೋಸ್ ಪಡೆದ ಬಳಿಕವೂ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಅವರು ಮನವಿ ಮಾಡಿದ್ದಾರೆ.