ಬೆಂಗಳೂರು : ಬಿಬಿಎಂಪಿ ಬೆಡ್ ಬ್ಲ್ಯಾಕಿಂಗ್ ದಂಧೆ ವಿಚಾರದಲ್ಲಿ ಒಂದೇ ಸಮುದಾಯಕ್ಕೆ ಸೇರಿದ 17 ಮಂದಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಮೂವರು ಶಾಸಕರು ವಿರುದ್ಧ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ಹೈಕೋರ್ಟ್ ನಿರಾಕರಿಸಿದೆ.
ಯೂಥ್ ಕಾಂಗ್ರೆಸ್ ಮುಖಂಡ ವೈ.ಬಿ.ಶ್ರೀವತ್ಸ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ, ಈ ಅರ್ಜಿ ರಾಜಕೀಯ ಪ್ರೇರಿತವಾಗಿದ್ದು, ಇದು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಇತ್ತಿಚೆಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಸಂಸದ ತೇಜಸ್ವಿ ಸೂರ್ಯ ಮತ್ತು ಮೂವರು ಬೆಂಗಳೂರು ನಗರದ ಶಾಸಕರು ಬೆಡ್ ಬ್ಲ್ಯಾಕಿಂಗ್ ದಂಧೆಯಲ್ಲಿ ಬಿಬಿಎಂಪಿ ವಾರ್ ರೂಂನಲ್ಲಿರುವ ಒಂದೇ ಸಮುದಾಯದ 17 ಮಂದಿಯ ಪಾತ್ರ ಇದೆ ಎಂದು ಆರೋಪಿಸಿದ್ದರು.
ಕೊರೊನಾ ಸಂಕಷ್ಟ ಕಾಲದಲ್ಲಿ ಬೆಡ್ ಬ್ಲ್ಯಾಕಿಂಗ್ ದಂಧೆ ಹೆಸರಿನಲ್ಲಿ ಸಂಸದರು ಶಾಸಕರು ಒಟ್ಟಾಗಿ ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಕೋಮು ಪ್ರಚೋದನೆ ಹೇಳಿಕೆ ನೀಡುತ್ತಿದ್ದು ಇದರಿಂದ ಸಮಾಜದ ಸಾಮರಸ್ಯ ಹಾಳಾಗಲಿದೆ ಎಂದು ವೈ.ಬಿ.ಶ್ರೀವತ್ಸ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.