ನವದೆಹಲಿ : ಎರಡನೇ ಅಲೆ ಕೊರೊನಾ ವೈರಸ್‌ನಿಂದ ಹೈರಾಣಾಗಿರುವ ದೇಶದ ಜನರು ಮೂರನೇ ಅಲೆಯ ಭೀತಿಯಲ್ಲಿ ವ್ಯಾಕ್ಸಿನ್ ಪಡೆದುಕೊಳ್ಳಲು ಮುಗಿಬಿಳುತ್ತಿದ್ದು ಈ ನಡುವೆ ವ್ಯಾಕ್ಸಿನ್ ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಬಹಳಷ್ಟು ಗೊಂದಲಗಳು ಸೃಷ್ಟಿಯಾಗಿದೆ.
ಮುಖ್ಯವಾಗಿ ಗರ್ಭಿಣಿ ಮಹಿಳೆಯರು ಮತ್ತು ಹಾಲುವುಣಿಸುವ ತಾಯಂದಿರುವ ಲಸಿಕೆ ಪಡೆಯಬೇಕಾ ಬೇಡ್ವಾ ಅನ್ನೊದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ.

ಗರ್ಭಿಣಿ ಸ್ತ್ರೀಯರು ವ್ಯಾಕ್ಸಿನ್ ಪಡೆಯಬಹುದು, ಆದರೆ ಅದು ಕಡ್ಡಾಯವಲ್ಲ ವ್ಯಾಕ್ಸಿನ್ ಪಡೆಯುವುದು ಅವರ ಆಯ್ಕೆಗೆ ಬಿಟ್ಟಿದ್ದು, ಅವಶ್ಯಕತೆ ಇದ್ದಲ್ಲಿ ತಮ್ಮಗೆ ಬೇಕಾದ ಯಾವುದೇ ಕೊರೊನಾ ಲಸಿಕೆಯನ್ನು ಅವರು ಪಡೆಯಬಹುದು ಎಂದು ಹೇಳಿದ್ದಾರೆ.
Pregnant women may be offered choice to take any COVID-19 vaccine;lactating women eligible for jabs any time after delivery:Govt panel
— Press Trust of India (@PTI_News) May 13, 2021
ಇನ್ನು ಹಾಲುವುಣಿಸುವ ತಾಯಂದಿರು ವ್ಯಾಕ್ಸಿನ್ ಪಡೆಯಲು ಸಮಸ್ಯೆ ಇಲ್ಲ, ಗರ್ಭಧಾರಣೆಯ ಬಳಿಕ ಯಾವಗ ಬೇಕಾದರೂ ಲಸಿಕೆ ಪಡೆಯಬಹುದು ಇದು ಮಹಿಳೆಯ ಆರೋಗ್ಯ ಮತ್ತು ಮಗುವಿನ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಒಂದು ವೇಳೆ ಯಾವುದೇ ವ್ಯಕ್ತಿ ಕೊರೊನಾ ಸೋಂಕಿತರಾಗಿದ್ದಲ್ಲಿ ಕನಿಷ್ಠ ಆರು ತಿಂಗಳು ವ್ಯಾಕ್ಸಿನ್ ಪಡೆಯುವುದನ್ನು ಮುಂದೂಡಬೇಕು ಎಂದು ಸಲಹೆ ನೀಡಿದ್ದಾರೆ.
Govt panel recommends those testing positive for COVID-19 should defer vaccination for six months after recovery:sources
— Press Trust of India (@PTI_News) May 13, 2021
ಈ ನಡುವೆ ಎನ್‌ಟಿಎಜಿಐಯಿಂದ ಕೇಂದ್ರ ಸರ್ಕಾರಕ್ಕೆ ಹೊಸ ಶಿಫಾರಸು ಮಾಡಿದ್ದು ಎರಡನೇ ಡೋಸ್ ಅವಧಿಯನ್ನು 12-16 ವಾರ ಕೋವಿಶೀಲ್ಡ್ ಲಸಿಕೆಗೆ ಅವಧಿ ವಿಸ್ತರಿಸಬಹುದು ಎಂದು ಪಿಟಿಐ ವರದಿ ಮಾಡಿದೆ.
Govt panel NTAGI recommends increasing gap between two doses of Covishield to 12-16 weeks, no change for Covaxin dosage interval:sources
— Press Trust of India (@PTI_News) May 13, 2021