ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಪತ್ತೆಯಾಗಿದ್ದು, ಅವರನ್ನು ಹುಡುಕಿ ಕೊಡುವಂತೆ ದೆಹಲಿಯ ಸಂಸತ್ ಮಾರ್ಗ್‌ನಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
NSUI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ ಆನ್ಲೈನ್ ಮೂಲಕ ಈ ದೂರು ದಾಖಲಿಸಿದ್ದು ಎರನಡೇ ಅಲೆಯ ಕೊರೊನಾ ಸಂಧರ್ಭದಲ್ಲಿ ಅಮಿತ್ ಶಾ ನಾಪತ್ತೆಯಾಗಿದ್ದು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ.

ಅಮಿತ್ ಶಾ ಕಡೆಯದಾಗಿ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕಾಣಿಸಿಕೊಂಡಿದ್ದರು, ಇದಾದ ಬಳಿಕ ಅವರು ನಾಪತ್ತೆಯಾಗಿದ್ದಾರೆ. ಕೊರೊನಾ ಮೊದಲ ಅಲೆ ಸಂಧರ್ಭದಲ್ಲೂ ಇದೇ ರೀತಿಯಲ್ಲಿ ಕಾಣೆಯಾಗಿದ್ದರು. ಈಗಲೂ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರು ನೀಡಿರುವ ಬಗ್ಗೆ ಮಾತನಾಡಿದ NSUI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ ಕರಿಯಪ್ಪ, ಜನರಿಗೆ ಸರ್ಕಾರದ ಅಗತ್ಯವಿರುವಾಗ ಮತ್ತು ಅಮಿತ್ ಶಾ ತಮ್ಮ ಹುದ್ದೆಯಿಂದ, ಕೆಲಸದಿಂದ ಕಾಣೆಯಾಗುತ್ತಾರೆ
ಜನರು ವಿನಾಶಕಾರಿ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ ಈ ಸಂಧರ್ಭದಲ್ಲಿ ಬೇಕಾಗಿರುವುದು ನಾಗರಿಕರನ್ನು ಬೆಂಬಲಿಸುವ ಮತ್ತು ಅವರ ಬೇಡಿಕೆಗಳಿಗೆ ಸ್ಪಂದಿಸುವ ಸರ್ಕಾರ. ಆದರೆ ಈ ಸರ್ಕಾರ ಪ್ರಸ್ತುತ ಅದನ್ನು ಮಾಡಲು ವಿಫಲವಾಗಿದ್ದು ಈ ಹಿನ್ನಲೆ ಅಮಿತ್ ಶಾ, ಅವರ ಹುದ್ದೆಯಿಂದ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದೆ ಎಂದು ಹೇಳಿದರು.