ನವದೆಹಲಿ : ಕೆನಡಾ ಮತ್ತು ಅಮೇರಿಕಾದಲ್ಲಿ ಮಕ್ಕಳಿಗೆ ಕೊರೊನಾ ವ್ಯಾಕ್ಸಿನ್ ನೀಡಲು ಅನುಮತಿ ನೀಡಿದ ಬೆನ್ನಲೆ ಭಾರತ ಎಚ್ಚೇತುಕೊಂಡಿದೆ. ಭಾರತದಲ್ಲೂ ಮಕ್ಕಳಿಗೆ ಕೊರೊನಾ ವ್ಯಾಕ್ಸಿನ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಭಾರತದಲ್ಲೂ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಸಲು ಭಾರತ್ ಬಯೋಟೆಕ್ ಸಂಸ್ಥೆಗೆ SEC ಅನುಮತಿ ನೀಡಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಿಗೆ ಅನುಮತಿ ನೀಡಿದೆ.
Subject Expert Committee (SEC) gives nod to Bharat Biotech's Covaxin for phase 2 and 3 human clinical trials on 2 to 18-year-olds: Sources#COVID19 pic.twitter.com/0FD1y3IGYh
— ANI (@ANI) May 12, 2021
2 ರಿಂದ 18 ವರ್ಷದ ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಯೋಗಗಳು ಶುರುವಾಗಿದ್ದು, ದೆಹಲಿ, ಪಾಟ್ನಾ, ನಾಗ್ಪುರ ಸೇರಿದಂತೆ ಹಲವು ಕಡೆ ಪ್ರಯೋಗಗಳು ನಡೆಯಲಿದೆ.
ಕ್ಲಿನಿಕಲ್ ಟ್ರಯಲ್‌ನಲ್ಲಿ ಸುರಕ್ಷತೆ, ಪ್ರತಿಕ್ರಿಯೆ ಮತ್ತು ಇಮ್ಯುನೊಜೆನೆಸಿಟಿ ಸೇರಿ ಒಟ್ಟು 525 ವಿಷಯಗಳ ಮೇಲೆ ಪ್ರಯೋಗ ನಡೆಯಲಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.