ಬೆಂಗಳೂರು : ರಾಜ್ಯದಲ್ಲಿ 14 ದಿನಗಳ ಲಾಕ್ಡೌನ್ ಜಾರಿಯಲ್ಲಿದ್ದು ಅನಗತ್ಯ ಮನೆಯಿಂದ ಹೊರಬಾರದಂತೆ ಸರ್ಕಾರ ಮನವಿ ಮಾಡಿಕೊಂಡಿದೆ. ಅಗತ್ಯ ವಸ್ತುಗಳನ್ನು ಸಮೀಪ ಅಂಗಡಿಗಳಲ್ಲಿ ಖರೀದಿಸುವಂತೆ ಸೂಚನೆ ನೀಡಿದೆ. ಒಂದು ವೇಳೆ ಅನಗತ್ಯವಾಗಿ ವಾಹನದಲ್ಲಿ ಸಂಚಾರ ಮಾಡುವುದು ಕಂಡು ಬಂದರೆ ಸೀಜ್ ಮಾಡುವ ಎಚ್ಚರಿಕೆಯನ್ನು ನೀಡಿದೆ.
ಆದರೆ ರಾಜ್ಯ ಸರ್ಕಾರದ ಆದೇಶಕ್ಕೆ ಸೊಪ್ಪು ಹಾಕದ ಜನರು ನಿತ್ಯ ನೂರಾರು ಸಂಖ್ಯೆಯಲ್ಲಿ ಕುಂಟು ನೆನಪುಗಳನ್ನು ಹೇಳಿಕೊಂಡು ತಮ್ಮ ವಾಹನದೊಂದಿಗೆ ರಸ್ತೆಗಿಳಿಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರು ನಿತ್ಯ ಸಾವಿರಾರು ಬೈಕ್, ಕಾರುಗಳು ಸೇರಿದಂತೆ ಹಲವು ಬಗೆಯ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ.

ಹೀಗೆ ಸೀಜ್ ಆಗಿರುವ ವಾಹನಗಳ ಮಾಲೀಕರು ಈಗ ವಾಹನಗಳನ್ನು ಬಿಡಿಸಿಕೊಳ್ಳುವುದೇಗೆ, ಇದಕ್ಕಿರುವ ನಿಯಮಗಳೇನು, ಈ ಪ್ರಕ್ರಿಯೆ ಹೇಗಿರಲಿದೆ ಎನ್ನುವ ಗೊಂದಲದಲ್ಲಿದ್ದಾರೆ. ಒಂದು ವೇಳೆ ನಿಮ್ಮ ವಾಹನ ಸೀಜ್ ಆಗಿದ್ದಲ್ಲಿ ನೀವೂ ಈ ಕೆಳಗಿನ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ಸೀಜ್ ಆಗಿರುವ ವಾಹನ ಮರಳಿ ಪಡೆಯಲು ನೀವೂ ನಿಮ್ಮ ವಾಹನ ಸೀಜ್ ಮಾಡಿದ ಪೊಲೀಸ್ ಠಾಣೆಗೆ ತೆರಳಿ
• ಜಫ್ತಿಯಾಗಿರುವ ವಾಹನದ ಆರ್.ಸಿ
• ಇನ್ಶುರೆನ್ಸ್ ಪ್ರತಿ
• ಡ್ರೈವಿಂಗ್ ಲೈಸೆನ್ಸ್
• ಪರ್ಮಿಟ್
• ಎಮಿಸನ್ ಟೆಸ್ಟ್ ರಿಪೋರ್ಟ್ ಮತ್ತು
• ವಾಹನದ ಮಾಲೀಕರ ಹೆಸರಿನಲ್ಲಿ 20 ಇಂಡಿಮ್ನಿಟಿ ಬಾಂಡ್
• ಸರ್ಕಾರದ ಯಾವುದಾದರೂ ಅಧಿಕೃತ ಗುರುತಿನ ಚೀಟಿ ಸಲ್ಲಿಸಬೇಕು

ವಾಹನ ಸೀಜ್ ಮಾಡಿದ ಪೊಲೀಸ್ ಠಾಣೆಯ ಪೊಲೀಸರು ವಾಹನ ಮರಳಿ ನೀಡಲು ಕರೆ ಮಾಡಲಿದ್ದು ಸೂಕ್ತ ದಾಖಲೆಗಳನ್ನು ಸಲ್ಲಿಸಿ ಕೋರ್ಟ್ ಮೂಲಕ ವಾಹನ ವಾಪಸ್ ಪಡೆದುಕೊಳ್ಳಬಹುದಾಗಿದೆ.