ಬೆಂಗಳೂರು : ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆಯಿಂದಾಗಿ ಕೊರೊನಾ ವ್ಯಾಕ್ಸಿನ್‌ನ ಎರಡನೇ ಡೋಸ್‌ನಿಂದ ಲಕ್ಷಾಂತರ ಮಂದಿ ವಂಚಿತರಾಗಿರುವ ಅನುಮಾನ ವ್ಯಕ್ತವಾಗಿದೆ. ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬರೆದ ಪತ್ರದಲ್ಲಿ ಉಲ್ಲೇಖಿಸಲಾದ ಅಂಕಿ ಅಂಶಗಳಿಂದ ಈ ಅನುಮಾನ ವ್ಯಕ್ತವಾಗಿದೆ.
ವ್ಯಾಕ್ಸಿನ್ ಹಂಚಿಕೆ ವಿಚಾರದಲ್ಲಿ ರಾಜಕೀಯ ಬೇಡ ಎಲ್ಲ ಅರ್ಹರಿಗೂ ಲಸಿಕೆ ಹಾಕುವ ಮೂಲಕ ರಾಜ್ಯದ ಜನರನ್ನು ಕಾಪಾಡಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಪತ್ರದ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಪತ್ರದಲ್ಲಿ ಸಿದ್ದರಾಮಯ್ಯ ಅವರು ಕೆಲವು ಅಂಕಿ ಅಂಶಗಳನ್ನು ಉಲ್ಲೇಖಿಸಿದ್ದು, ಈ ಅಂಕಿ ಅಂಶಗಳು ರಾಜ್ಯದಲ್ಲಿ ಲಕ್ಷಾಂತರ ಮಂದಿ ಎರಡನೇ ಡೋಸ್ ನಿಂದ ವಂಚಿತರಾಗಿರುವ ಅನುಮಾನವ್ಯಕ್ತವಾಗಿದೆ.
ಸಿದ್ದರಾಮಯ್ಯ ಅವರ ಪತ್ರದಲ್ಲಿ ಉಲ್ಲೇಖಿಸಿರುವಂತೆ, ರಾಜ್ಯದಲ್ಲಿ 18 ವರ್ಷ ತುಂಬಿದವರು 4.37 ಕೋಟಿ ಜನರಿದ್ದಾರೆ. ಆದರೆ ಇದುವರೆಗೆ ಎರಡೂ ಡೋಸ್ ಲಸಿಕೆ ನೀಡಿರುವುದು ಕೇವಲ 17,77,751 ಜನರಿಗೆ ಮಾತ್ರ ಅಂದರೆ ಕೇವಲ ಶೇ. 4.06 ರಷ್ಟು ಜನರಿಗೆ ಮಾತ್ರ ಈವರೆಗೂ ಲಸಿಕೆ ನೀಡಲಾಗಿದೆ.

ರಾಜ್ಯದಲ್ಲಿ 6,85,327 ಜನ ಹೆಲ್ತ್ ಕೇರ್ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದೆ, ಆದರೆ ಎರಡನೇ ಡೋಸ್ ನೀಡಿರುವುದು ಕೇವಲ 4,39,162 ಜನರಿಗೆ ಮಾತ್ರ. 4,40,302 ಜನ ಫ್ರಂಟ್ ಲೈನ್ ಕಾರ್ಯಕರ್ತರಿಗೆ ಮೊದಲ ಡೊಸ್ ನೀಡಲಾಗಿದ್ದು,ಎರಡನೆ ಡೋಸ್ ನೀಡಿರುವುದು ಕೇವಲ 1,67,581 ಜನರಿಗೆ ಮಾತ್ರ. 60 ವರ್ಷ ತುಂಬಿದವರಲ್ಲಿ 8,41,056 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. 18 ರಿಂದ 45 ರ ವಯೋಮಾನದವರಲ್ಲಿ ಇದುವರೆಗೆ ಕೇವಲ 5,759 ಮಂದಿಗೆ ಮಾತ್ರ ಮೊದಲ ಡೋಸ್ ನೀಡಲಾಗಿದೆಯಂತೆ.

ಕೊರೊನಾ ವಾರಿಯರಸ್ ಗೆ ಲಸಿಕೆ ನೀಡಲು ಆರಂಭಿಸಿ ತಿಂಗಳುಗಳೆ ಕಳೆದಿದೆ ಈವರೆಗೂ ಎರಡನೇ ಡೋಸ್ ಬಾಕಿ ಉಳಿಯಲು ಸಾಧ್ಯವಿಲ್ಲ ಎನ್ನಲಾಗುತ್ತಿದ್ದು ಅಂಕಿ ಅಂಶಗಳ ಪ್ರಕಾರ ಸುಮಾರು ನಾಲ್ಕು ಲಕ್ಷ ಮಂದಿ ಹೆಲ್ತ್ ಕೇರ್ ಕಾರ್ಯಕರ್ತರು ಮತ್ತು ಫ್ರಂಟ್‌ಲೈನ್ ವಾರಿಯರ್ಸ್ ಎರಡನೇ ಡೋಸ್‌ನಿಂದ ವಂಚಿತರಾಗಿರುವ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕಿದೆ.