ಕಳೆದೊಂದು ವಾರದಲ್ಲಿ ಪೆಟ್ರೋಲ್ ಬೆಲೆ 1.13 ರೂ.ಗೆ ಏರಿಕೆ
ನವದೆಹಲಿ: ಪೆಟ್ರೋಲ್-ಡೀಸೆಲ್ ಬೆಲೆ ಸೋಮವಾರವೂ ಏರಿಕೆ ಕಂಡಿದೆ. ದೆಹಲಿಯಲ್ಲಿ ಪ್ರತಿ ಲೀ. ಪೆಟ್ರೋಲ್ ಬೆಲೆ 26 ಪೈಸೆ ಮತ್ತು ಡೀಸೆಲ್ ಪ್ರತಿ ಲೀ.ಗೆ 33 ಪೈಸೆ ಏರಿಕೆ ಕಂಡಿದೆ. ಕೊರೊನಾ ಸಂಕಷ್ಟದಲ್ಲೂ ಬೆಲೆ ಏರಿಕೆ ಆಗುತ್ತಿರೋದಕ್ಕೆ ಕಾಂಗ್ರೆಸ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸುರ್ಜೇವಾಲಾ, ಬಿಜೆಪಿ ಅಂದ್ರೆ ಭಯಂಕರ್ ಜನ್ ಲೂಟ್ ಪಾರ್ಟಿ ಎಂದು ಜರಿದಿದ್ದಾರೆ.

ರಣ್‍ದೀಪ್ ಸುರ್ಜೇವಾಲಾ ಟ್ವೀಟ್: ಭಯಂಕರ್ ಜನ್ ಲೂಟ್ ಪಾರ್ಟಿ ಆಗಿರುವ ಬಿಜೆಪಿ ಕಳೆದ ಏಳು ದಿನಗಳಲ್ಲಿ ಪೆಟ್ರೋಲ್ ಬೆಲೆ 1.13 ರೂ. ಮತ್ತು ಡೀಸೆಲ್ ಬೆಲೆ 1.33ರಷ್ಟು ಹೆಚ್ಚಿಸಿದೆ. ಕೋವಿಡ್-19 ಸಂಕಟದಲ್ಲಿ ಈ ವಸೂಲಿ ಅನ್ಯಾಯ. ಮೋದಿ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕಲಿದೆ? ವಿಪತ್ತಿನ ಸಂದರ್ಭದಲ್ಲಿ ಬೆಲೆ ಏರಿಕೆ ಅವಶ್ಯಕವಿತ್ತೆ ಎಂದು ಪ್ರಶ್ನಿಸಿದ್ದಾರೆ.
‘भयंकर जनलूट पार्टी’ यानी BJP ने सात दिन में पेट्रोल के दाम 1.13 रुपये और डीज़ल में 1.33 रुपये प्रति लीटर बढ़ा दिये हैं।#COVID19 संकट में ये वसूली नाजायज़ है।
— Randeep Singh Surjewala (@rssurjewala) May 10, 2021
जनता की कितना और जेब काटेगी मोदी सरकार?
क्या यही “आपदा में अवसर” है?https://t.co/S0gfl6NNsF
ವಿಧಾನಸಭಾ ಚುನಾವಣೆ ಅಂತ್ಯವಾಗುತ್ತಲೇ ಪೆಟ್ರೋಲ್, ಡೀಸೆಲ್ ಬೆಲೆ ಹಂತ ಹಂತವಾಗಿ ಏರಿಕೆಯಾಗುತ್ತಿದೆ. ತೈಲ ಕಂಪನಿಗಳು ಸತತವಾಗಿ ನಾಲ್ಕು ದಿನ ಬೆಲೆಯನ್ನ ಹೆಚ್ಚಿಸಿವೆ. ದೇಶದ ಪ್ರಮುಖ ನಗರಗಳಲ್ಲಿ ತೈಲ ಬೆಲೆ ಎಷ್ಟಿದೆ ಅನ್ನೋದರ ಮಾಹಿತಿ ಇಲ್ಲಿದೆ.
- ಬೆಂಗಳೂರು: ಪೆಟ್ರೋಲ್-94.57 ರೂ, ಡೀಸೆಲ್ – 86.64
- ದೆಹಲಿ: ಪೆಟ್ರೋಲ್-91.53 ರೂ, ಡೀಸೆಲ್- 82.06 ರೂ.
- ಮುಂಬೈ: ಪೆಟ್ರೋಲ್-97.86 ರೂ., ಡೀಸೆಲ್-89.17 ರೂ.
- ಕೋಲ್ಕತ್ತಾ: ಪೆಟ್ರೋಲ್-91.66 ರೂ, ಡೀಸೆಲ್-84.90 ರೂ.
- ಚೆನ್ನೈ: ಪೆಟ್ರೋಲ್-93.60 ರೂ., ಡೀಸೆಲ್-86.96 ರೂ.