ಬೆಂಗಳೂರು : ಕಠಿಣ ಲಾಕ್ಡೌನ್ ಜಾರಿಯಾದ ಮೊದಲ ದಿನವೇ ನಗರದ ಹಲವು ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸುತ್ತಿರುವ ಜನರ ಮೇಲೆ ಪೊಲೀಸರು ಬಲ ಪ್ರಯೋಗ ಮಾಡುತ್ತಿದ್ದು ಇದಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ.
ಇಂದು ಬೆಳಗ್ಗೆಯಿಂದಲೇ ಸಾರ್ವಜನಿಕರ ಮೇಲೆ ಬಲ ಪ್ರಯೋಗ ಮಾಡುತ್ತಿದ್ದು ಮನೆಯಿಂದ ಹೊರ ಬರುವ ಜನರಿಗೆ ಲಾಠಿ ರುಚಿ ತೋರಿಸಲಾಗುತ್ತಿದೆ. ಆದರೆ ಪೊಲೀಸರು ಜನರ ಪೂರ್ವಾಪರ ವಿಚಾರಿಸದೇ ಹಲ್ಲೆಗೆ ಮುಂದಾಗುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬಂದಿದೆ.

ಈ ಹಿನ್ನಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಸಾರ್ವಜನಿಕರ ಮೇಲೆ ಬಲ ಪ್ರಯೋಗ ಮಾಡದಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಟ್ವಿಟ್ ಮೂಲಕ ಅವರು ಈ ಮಾಹಿತಿ ನೀಡಿದ್ದು ನಿಯಮ ಉಲ್ಲಂಘಿಸುವ ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದು ಬಲ ಪ್ರಯೋಗ ಮಾಡದಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
In case of any issue regarding travel to the place of work or carrying out permitted activities during the lockdown, DCP Intelligence Shri. Santhosh Babu, IPS, may be contacted on 080-22942354. (2/2)
— Kamal Pant, IPS (@CPBlr) May 10, 2021
ಇನ್ನು ಕೆಲಸದ ಸ್ಥಳಕ್ಕೆ ಪ್ರಯಾಣಿಸುವಾಗ ಅಥವಾ ಲಾಕ್ ಡೌನ್ ಸಮಯದಲ್ಲಿ ಅನುಮತಿಸಲಾದ ಚಟುವಟಿಕೆಗಳಿಗೆ ಯಾವುದೇ ಸಮಸ್ಯೆಯಾದ್ದಲ್ಲಿ, ಗುಪ್ತಚರ ವಿಭಾಗದ ಡಿಸಿಪಿ ಸಂತೋಷ್ ಬಾಬು ಅವರನ್ನು ಸಂಪರ್ಕಿಸಲು ಕಮಲ್ ಪಂಥ್ ಮನವಿ ಮಾಡಿದ್ದಾರೆ.