ಬೆಂಗಳೂರು : ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಇಂದಿನಿಂದ 14 ದಿನಗಳ ಕಾಲ ರಾಜ್ಯ ಸರ್ಕಾರ ಲಾಕ್ಡೌನ್ ಜಾರಿ ಮಾಡಿದ್ದು ಶಾಸಕರು ಮತ್ತು ಸಂಸದರು ಕ್ಷೇತ್ರದಲ್ಲಿದ್ದು ಕಟ್ಟುನಿಟ್ಟಾಗಿ ನಿಯಮಗಳು ಜಾರಿಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಎಲ್ಲರ ಸಕ್ರಿಯ ಸಹಕಾರವಿಲ್ಲದೆ ಇದು ಯಶಸ್ವಿಯಾಗುವುದಿಲ್ಲ. ಈನಿಟ್ಟಿನಲ್ಲಿ ಏನೇ ಅಡೆತಡೆ, ಸಮಸ್ಯೆಗಳಿದ್ದರೆ, ದಯವಿಟ್ಟು ಅದನ್ನು ಜಿಲ್ಲಾಧಿಕಾರಿಗಳ, ಜಿಲ್ಲಾ ಉಸ್ತುವಾರಿ ಸಚಿವರ ಅಥವಾ ನೇರವಾಗಿ ನನ್ನ ಗಮನಕ್ಕೆ ತನ್ನಿ. ಒಟ್ಟಾಗಿ ನಾವು ಕೊರೋನಾವನ್ನು ಸೋಲಿಸೋಣ. ಸಾರ್ವಜನಿಕರು ಕೂಡ ಸೋಂಕು ನಿಯಂತ್ರಿಸಲು ಸಹಕರಿಸಿ ಎಂದು ಮನವಿ ಮಾಡುತ್ತೇನೆ.(2/2)
— CM of Karnataka (@CMofKarnataka) May 10, 2021
ಲಾಕ್ಡೌನ್ ಸಂಬಂಧ ಸರಣಿ ಟ್ವಿಟ್ ಮಾಡಿರುವ ಅವರು, ಎಲ್ಲರ ಸಕ್ರಿಯ ಸಹಕಾರವಿಲ್ಲದೆ ಲಾಕ್ಡೌನ್ ಯಶಸ್ವಿಯಾಗುವುದಿಲ್ಲ, ಈ ನಿಟ್ಟಿನಲ್ಲಿ ಏನೇ ಅಡೆತಡೆ, ಸಮಸ್ಯೆಗಳಿದ್ದರೆ ಅದನ್ನು ಜಿಲ್ಲಾಧಿಕಾರಿಗಳ, ಜಿಲ್ಲಾ ಉಸ್ತುವಾರಿ ಸಚಿವರ ಅಥವಾ ನೇರವಾಗಿ ತಮ್ಮ ಗಮನಕ್ಕೆ ತನ್ನಿ, ಒಟ್ಟಾಗಿ ನಾವು ಕೊರೋನಾವನ್ನು ಸೋಲಿಸೋಣ ಎಂದು ಬಿಎಸ್‌ವೈ ಜನಪ್ರತಿನಿಧಿಗಳಿಗೆ ಹೇಳಿದ್ದಾರೆ.
ಕೋವಿಡ್ ಸೋಂಕು ಹರಡುವುದನ್ನು ತಡೆಯಲು ನಾವು 14 ದಿನಗಳ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಮಾರ್ಗಸೂಚಿಗಳನ್ನು ತಪ್ಪದೇ ಅನುಸರಿಸಿ, ವೈರಾಣು ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರದೊಂದಿಗೆ ಸಹಕರಿಸಿ ಎಂದು ಸಮಸ್ತ ನಾಗರಿಕರಲ್ಲಿ ಮನವಿ ಮಾಡುತ್ತೇನೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ, ನಾವು ಒಟ್ಟಾಗಿ ಕೊರೋನಾವನ್ನು ಹಿಮ್ಮೆಟ್ಟಿಸೋಣ.
— CM of Karnataka (@CMofKarnataka) May 10, 2021
ಕೊರೊನಾ ಸೋಂಕು ಹರಡುವುದನ್ನು ತಡೆಯಲು 14 ದಿನಗಳ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಮಾರ್ಗಸೂಚಿಗಳನ್ನು ತಪ್ಪದೇ ಅನುಸರಿಸಬೇಕು ಹೀಗಾಗಿ ವೈರಾಣು ಹರಡುವಿಕೆಯನ್ನು ನಿಯಂತ್ರಿಸಲು ಸರ್ಕಾರದೊಂದಿಗೆ ಸಹಕರಿಸಿ ಎಂದು ಸಾರ್ವಜನಿಕರಿಗೂ ಬಿಎಸ್‌ವೈ ಟ್ವಿಟ್ ಮೂಲಕ ಮನವಿ ಮಾಡಿದ್ದಾರೆ.