ನವದೆಹಲಿ : ವಿದೇಶಗಳಿಂದ ದಾನದ ರೂಪದಲ್ಲಿ ಆಮದಾಗುತ್ತಿರುವ ವೈದ್ಯಕೀಯ ಉಪಕರಣಗಳಿಗೆ ಆಮದು ಸುಂಕ ಮತ್ತು ಅಂತರಾಷ್ಟ್ರೀಯ ಜಿಎಸ್ಟಿ ವಿನಾಯಿತಿ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ತಿಳಿಸಿದ್ದಾರೆ.
ಐಜಿಎಸ್ಟಿ ಮತ್ತು ಕಸ್ಟಮ್ಸ್ ವಿನಾಯಿತಿ ಕೋರಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬರೆದ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ಮಲಾ ಸೀತರಾಮನ್, ಮೇ 3 ರಿಂದಲೇ ವಿನಾಯಿತಿ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Full exemption from Customs duties, including IGST, is already available to all COVID relief material imported by Indian Red Cross Society for free distribution in the country: Finance Minister Nirmala Sitharaman on West Bengal CM Mamata Banerjee's letter to PM pic.twitter.com/2HFGsG98Kk
— ANI (@ANI) May 9, 2021
ದೇಶದಲ್ಲಿ ಆಕ್ಸಿಜನ್ ಸೇರಿದಂತೆ ಹಲವು ವೈದ್ಯಕೀಯ ಸಲಕರಣೆಗಳ ಕೊರತೆ ಸೃಷ್ಟಿಯಾಗಿದೆ. ಈ ವಸ್ತುಗಳನ್ನು ಹಲವು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು ಅವುಗಳಿಗೆ ಜಿಎಸ್ಟಿ, ಆಮದು ಸುಂಕದ ವಿನಾಯಿತಿ ನೀಡಿದೆ. ಮತ್ತು ರೆಡ್ ಕ್ರಾಸ್ ಸೊಸೈಟಿ ಆಮದು ಮಾಡಿಕೊಂಡಿರುವ ಕೊರೊನಾ ಚಿಕಿತ್ಸಾ ವಸ್ತುಗಳಿಗೂ ವಿನಾಯಿತಿ ನೀಡಲಾಗಿದೆ ಎಂದು ನಿರ್ಮಲಾ ಸೀತರಾಮನ್ ಹೇಳಿದ್ದಾರೆ.
In view of the request by donors of O2 concentrators, cylinders & COVID related drugs for exemption of these items from customs duty/GST, I request that these items may be exempted from GST/customs duty and other such taxes: West Bengal CM Mamata Banerjee in a letter to PM Modi pic.twitter.com/2MAeamj3x3
— ANI (@ANI) May 9, 2021
ಆಕ್ಸಿಜನ್ ಸೇರಿ ಹಲವು ಕೊರೊನಾ ವೈದ್ಯಕೀಯ ವಸ್ತುಗಳ ಕೊರತೆ ಹಿನ್ನಲೆ ಹಲವು ದಾನಿಗಳು ಭಾರತಕ್ಕೆ ದಾನದ ರೂಪದಲ್ಲಿ ವೈದ್ಯಕೀಯ ವಸ್ತುಗಳ ದಾನ ಮಾಡುತ್ತಿದ್ದು ಅವುಗಳಿಗೆ ಜಿಎಸ್ಟಿ ಮತ್ತು ಕಸ್ಟಮ್ಸ್ ವಿನಾಯಿತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದರು.