ಬೆಂಗಳೂರು : ಸಿಟಿ ಸ್ಕ್ಯಾನ್ ಮತ್ತು ಎಕ್ಸ್-ರೇ ಗೆ ನಿನ್ನೆ ಏಕರೂಪದ ದರ ನಿಗದಿ ಮಾಡಿದ್ದ ರಾಜ್ಯ ಸರ್ಕಾರ ಹಲವು ಮನವಿಗಳ ಬಳಿಕ ಎರಡು ಪರೀಕ್ಷೆಗಳ ಬೆಲೆಯನ್ನು ಪರಿಷ್ಕರಣೆ ಮಾಡಿ ಹೊಸ ಆದೇಶ ಹೊರಡಿಸಿದೆ.

ನಿನ್ನೆಯ ಆದೇಶದಲ್ಲಿ ಖಾಸಗಿ ಆಸ್ಪತ್ರೆ/ಲ್ಯಾಬ್ ಗಳಲ್ಲಿ ಸಿಟಿ ಸ್ಕ್ಯಾನ್ ಗೆ ಗರಿಷ್ಠ ರೂ.1,500 ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಸಿಟಿ ಸ್ಕ್ಯಾನ್ ವೊಂದಕ್ಕೆ 3500 ದಿಂದ 4500 ಸಾವಿರ ಆಗಲಿದೆ ಆದರೆ ಸರ್ಕಾರ 1500 ಇಳಿಕೆ ಮಾಡಿದರೇ ವಿದ್ಯುತ್ ಬಿಲ್, ಲ್ಯಾಬ್ ಟೆಕ್ನಿಷಿಯನ್ ಶುಲ್ಕ ಸೇರಿದಂತೆ ಹಲವು ಖರ್ಚುಗಳನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಲ್ಯಾಬ್ ಮಾಲೀಕರು ಮನವಿ ಮಾಡಿಕೊಂಡಿದ್ದರು.

ಈ ಹಿನ್ನಲೆಯಲ್ಲಿ ಇಂದು ದರ ಪರಿಷ್ಕರಣೆ ಮಾಡಿರುವ ರಾಜ್ಯ ಸರ್ಕಾರ ಸ್ಕ್ಯಾನ್ ಮತ್ತು ಎಕ್ಸ್-ರೇ ಗೆ ಬಿಪಿಎಲ್ ಕಾರ್ಡ್ ಇದ್ದ ರೋಗಿಗಳಿಗೆ ₹1500, ಬಿಪಿ ಕಾರ್ಡ್ ಇಲ್ಲದ ಇತರೇ ರೋಗಿಗಳಿಗೆ ₹2500 ದರ ನಿಗದಿ ಮಾಡಿ ಆದೇಶ ಹೊರಡಿಸಿದೆ. ಇಂದಿನಿಂದಲೇ ಆದೇಶ ಜಾರಿಯಾಗಲಿದೆ ಎಂದು ಆದೇಶದಲ್ಲಿ ತಿಳಿಸಿದೆ.