ಜಿಲ್ಲೆಯಿಂದ ಜಿಲ್ಲೆ ಓಡಾಟ ಇಲ್ಲ
ಬೆಂಗಳೂರು: ಮೇ 10ರ ಬೆಳಗ್ಗೆ 6 ರಿಂದ ರಾಜ್ಯದಲ್ಲಿ ಕಠಿಣ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಈ ಕುರಿತು ಸಿಎಂ ಯಡಿಯೂರಪ್ಪ 15 ದಿನ ಕರ್ನಾಟಕ ಲಾಕ್‍ಡೌನ್ ಘೋಷಣೆ ಮಾಡಿದರು.

ಮೇ 10 ರಿಂದ ಮೇ 24ರವರೆಗೆ ಕರ್ನಾಟಕ ಸಂಪೂರ್ಣ ಲಾಕ್ ಆಗಲಿದೆ. ಬೆಳಗ್ಗೆ 6 ರಿಂದ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಹಾಲು, ತರಕಾರಿ, ಮಾಂಸ, ಹಣ್ಣು ಖರೀದಿಗೆ ಅವಕಾಶ ನೀಡಲಾಗಿದೆ. ಸರ್ಕಾರಿ ಕಚೇರಿಗಳು ಭಾಗಶಃ ಕಾರ್ಯನಿರ್ವಹಿಸಲಿವೆ. ಉಳಿದಂತೆ ಎಲ್ಲವೂ ಬಂದ್ ಆಗಲಿವೆ.

ಕಟ್ಟಡ, ರಸ್ತೆ ಕಾಮಗಾರಿಗಳಿಗೆ ಅನುಮತಿ ನೀಡಲಾಗಿದೆ. ಮದುವೆಗಳಲ್ಲಿ 50ಕ್ಕಿಂತ ಹೆಚ್ಚಿನ ಜನರು ಭಾಗವಹಿಸುವಂತಿಲ್ಲ. ಇದರ ಜೊತೆಗೆ ಅಂತರ್ ಜಿಲ್ಲಾ ಓಡಾಟಕ್ಕೂ ಸಂಪೂರ್ಣ ನಿರ್ಬಂಧ ಹಾಕಲಾಗಿದೆ. ಹೋಟೆಲ್, ಬಾರ್, ರೆಸ್ಟೋರೆಂಟ್ ಮತ್ತು ಪಬ್ ಬಂದ್ ಆಗಲಿವೆ. ಹಾಲಿನ ಬೂತ್ ಗಳು ಮಾತ್ರ ಬೆಳಗ್ಗೆ 6 ರಿಂದ ಸಂಜೆಯವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.