ಬೆಂಗಳೂರು: ರಾಜ್ಯದಲ್ಲಿ ಇಂದು 48,781 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 28,263 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಕೋವಿಡ್-19 ಸೋಂಕಿನಿಂದ 592 ಜನರು ಇವತ್ತು ಪ್ರಾಣಕಳೆದುಕೊಂಡಿದ್ದು, ಇದುವರೆಗೂ 17,804 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಪ್ರಮಾಣ ಶೇ.1.21ರಷ್ಟಿದೆ. ಸದ್ಯ ರಾಜ್ಯದಲ್ಲಿ 5,36,641 ಸಕ್ರಿಯ ಪ್ರಕರಣಗಳಿವೆ. ಕೋವಿಡ್-19 ಸೋಂಕಿನ ಖಚಿತ ಪ್ರಕರಣಗಳ ಸಂಖ್ಯೆ 18,38,885ಕ್ಕೇರಿಯಾಗಿದೆ.
ಇಂದಿನ 07/05/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/KlWYvWjNMg @CMofKarnataka @BSYBJP @mla_sudhakar @drashwathcn @RAshokaBJP @BSBommai @CPBlr @PIBBengaluru @KarnatakaVarthe @PIBBengaluru @BBMPCOMM @BlrCityPolice @blrcitytraffic pic.twitter.com/yYeBrR2wii
— K'taka Health Dept (@DHFWKA) May 7, 2021
ಕೋವಿಡ್ ಸೋಂಕಿನ ಪ್ರಮಾಣ ಶೇ.30.69ಕ್ಕೆ ಏರಿಕೆಯಾಗಿದೆ. ಇಂದು 1,58,902 ಸ್ಯಾಂಪಲ್ ಗಳನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಪರೀಕ್ಷೆಗೊಳಗಾದ 100 ಜನರಲ್ಲಿ 30 ಂದಿಗೆ ಸೋಂಕು ದೃಢವಾಗುತ್ತಿದೆ.
ಕರ್ನಾಟಕ ಲಾಕ್‌ಡೌನ್, ಏನಿರುತ್ತೆ? ಏನಿರಲ್ಲ? ಇಲ್ಲಿದೆ ನೋಡಿ ಲಾಕ್‌ಡೌನ್ ಮಾರ್ಗಸೂಚಿhttps://t.co/xQr05upAGG#karnatakaLockdown #LockdownGuidelines #seculartv #kannadnews #bangalore #yediyurappa #lockdownkarntaka #covid19 #covid #coronavirus #secondwave
— Secular TV (@SecularTVKannad) May 7, 2021
ಬೆಂಗಳೂರಿನಲ್ಲಿ 21,376 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 346 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ 3,41,978 ಸಕ್ರಿಯ ಪ್ರಕರಣಗಳಿವೆ. ಇನ್ನುಳಿದಂತೆ ಬಳ್ಳಾರಿ 1,284, ದಕ್ಷಿಣ ಕನ್ನಡ 1,633, ಕಲಬುರಗಿ 1,722, ಮಂಡ್ಯ 1,110, ಮೈಸೂರು 2,246, ಮೈಸೂರು 3,040 ಜನಕ್ಕೆ ಸೋಂಕು ತಗುಲಿದೆ.