ಬೆಂಗಳೂರು : ಜನತಾ ಲಾಕ್ಡೌನ್ ನಿಂದ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆ ಕಳದ ವರ್ಷದ ಮಾದರಿಯಲ್ಲಿ ಕಠಿಣ ಲಾಕ್ಡೌನ್ ಜಾರಿ ಮಾಡಲು ತಿರ್ಮಾನಿಸಿದೆ. ಇಂದು ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಸಿಎಂ ಬಿ.ಎಸ್ ಯಡಿಯೂರಪ್ಪ ಈ ಮಹತ್ವದ ತಿರ್ಮಾನ ತೆಗೆದುಕೊಂಡಿದ್ದಾರೆ.
ಮೇ 10 ರಿಂದ 14 ದಿನಗಳ ಲಾಕ್ಡೌನ್ ಬಹುತೇಕ ಖಚಿತ ಎನ್ನಲಾಗಿದ್ದು ಈ ಬಗ್ಗೆ ಅಧಿಕೃತ ಆದೇಶವೊಂದೇ ಹೊರ ಬರಬೇಕಿದೆ. ಲಾಕ್ಡೌನ್ ಮಾಡುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಈಗಾಗಲೇ ಹಲವು ಸಚಿವರು ಸೆಕ್ಯೂಲರ್ ಟಿವಿ ದೃಢಪಡಿಸಿದ್ದಾರೆ.
ಅಗತ್ಯ ಸೇವೆಗಳ ಕಚೇರಿ ಹೊರತುಪಡಿಸಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಬಂದ್ ಆಗಲಿದ್ದು, ಖಾಸಗಿ ವಾಹನ, ಸಮೂಹ ವಾಹನಗಳು ಸಂಪೂರ್ಣ ಬಂದ್ ಆಗಲಿದೆ ಎಂದು ತಿಳಿದು ಬಂದಿದೆ.
ಅಂತರ್ ಜಿಲ್ಲೆಗಳ ಪ್ರಯಾಣ ಕೂಡಾ ಬಂದ್ ಆಗಲಿದ್ದು ಪ್ರತಿ ಏರಿಯಾಗಳನ್ನು ಬ್ಯಾರಿಕೇಡ್ ಹಾಕಿ ಲಾಕ್ಡೌನ್ ಮಾಡಲು ರಾಜ್ಯ ಸರ್ಕಾರ ಚಿಂತನೆ ಮಾಡಿದೆ ಎನ್ನಲಾಗಿದೆ. ವಾರದ ಮೂರು ದಿನ ಮಾತ್ರ ಸೀಮಿತ ಅವಧಿಗೆ ಮಾರುಕಟ್ಟೆಗಳು ತೆರೆಯಲಿದ್ದು ಬಾಕಿ ಸಂದರ್ಭಗಳಲ್ಲಿ ಕರ್ನಾಟಕ ಸಂಪೂರ್ಣ ಸ್ತಬ್ಧವಾಗಲಿದೆ.

ಇನ್ನು ಮೇ 10 ವರೆಗೂ ನಿಗಧಿಯಾಗಿರುವ ಮದುವೆಗಳಿಗೆ ಮಾತ್ರ ಅವಕಾಶವಿದ್ದು ಕೇವಲ 20 ಮಂದಿ ಮಾತ್ರ ಭಾಗಿಯಾಗಬೇಕು. ಮೇ 10 ರ ಬಳಿಕ ಮದುವೆ ಇನ್ನಿತರ ಶುಭ ಕಾರ್ಯಗಳಿಗೆ ಅವಕಾಶ ನೀಡದಿರಲು ಚಿಂತಿಸಿದೆ.
ಲಾಕ್ಡೌನ್ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಡಿತರ ಹೆಚ್ಚಿಸಲು ರಾಜ್ಯ ಸರ್ಕಾರ ಯೋಜನೆ ಹಾಕಿಕೊಂಡಿದ್ದು ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆ 14 ದಿನಗಳ ಲಾಕ್ಡೌನ್ ಜಾರಿ ಮಾಡಲು ಪ್ಲ್ಯಾನ್ ಮಾಡಿದ್ದು ಸೋಂಕು ನಿಯಂತ್ರಣ ಬಾರದಿದ್ದಲ್ಲಿ ಮತ್ತಷ್ಟು ದಿನ ಮುಂದೂಡಿಕೆಯಾಗುವ ಸಾಧ್ಯತೆಗಳಿದೆ.