ಬೆಂಗಳೂರು: ತಮ್ಮದೇ ಸರ್ಕಾರದ, ತಮ್ಮದೇ ಶಾಸಕರಿರೋ ಕ್ಷೇತ್ರದ ಬೆಡ್ ಬ್ಲಾಕಿಂಗ್ ಹಗರಣವನ್ನೇ ಬಯಲು ಮಾಡಿದ ಸಂಸದ ತೇಜಸ್ವಿ ಸೂರ್ಯ ಅದಕ್ಕೂ ಕೋಮು ಸ್ಪರ್ಶ ನೀಡಿ ರಾಷ್ಟ್ರ ಮಟ್ಟದಲ್ಲಿ ಚೀ ಥೂ ಅನ್ನಿಸಿಕೊಳ್ಳುತ್ತಿದ್ದಾರೆ. ವಾರ್ ರೂಮಿನಲ್ಲಿ ಸುಮಾರು 205ಕ್ಕೂ ಹೆಚ್ಚು ಜನ ಕೆಲಸ ಮಾಡ್ತಿದ್ದಾರೆ. ಆದ್ರೆ ಸುದ್ದಿಗೋಷ್ಠಿಯಲ್ಲಿ ಮಾತ್ರ ಸಂಸದ ತೇಜಸ್ವಿ ಸೂರ್ಯ, ಪಟ ಪಟ ಅಂತ 17 ಮುಸ್ಲಿಂ ಸಿಬ್ಬಂದಿಯ ಹೆಸರನ್ನ ಕಂಠಪಾಠ ಮಾಡಿಕೊಂಡು ಬಂದಂತೆ ಕ್ಯಾಮೆರಾ ಮುಂದೆ ಮೇಜು ಕುಟ್ಟಿ ಕುಟ್ಟಿ ಆ ದಿನದ ಪಾಠವನ್ನ ಒಪ್ಪಿಸಿದರು.

ಬೆಡ್ ಬ್ಲಾಕಿಂಗ್ ಅಕ್ರಮ ಹೊರಗೆ ತಂದ ತೇಜಸ್ವಿಗೆ ಪಕ್ಷಾತೀತವಾಗಿ ಎಲ್ಲರೂ ಮೆಚ್ಚುಗೆ ಸೂಚಿಸಿದರು. ಆದ್ರೆ ಇಲ್ಲಿಯೂ ತನ್ನ ಕೋಮು ಬುದ್ಧಿಯನ್ನ ತೋರಿಸಿದ ತೇಜಸ್ವಿ ಸೂರ್ಯ ಅವರನ್ನ ಸಂಸದ ಸೈಯದ್ ನಾಸೀರ್ ಹುಸೈನ್ ಆಕ್ರೋಶ ವ್ಯಕ್ತಪಡಿಸಿದರು. 205 ಜನರ ಲಿಸ್ಟ್ ತೆಗೆದುಕೊಂಡು ಕೇವಲ 17 ಮುಸ್ಲಿಮರ ಹೆಸರನ್ನ ತೆಗೆದುಕೊಳ್ಳುತ್ತಾರೆ. ಇವರಿಗೆ ಏನಾದ್ರೂ ಮಾನ ಮರ್ಯಾದೆ ಇದೆಯಾ ಎಂದು ಖಾರವಾಗಿ ಪ್ರಶ್ನಿಸಿದರು.
ಈ ಸಂಸದರು ಹಿಂದಿನಿಂದಲೂ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಸಿಎಎ, ಎನ್‍ಆರ್ ಸಿ ಪ್ರತಿಭಟನೆ ವೇಳೆ ಪಂಚರ್ ವಾಲಾ ಅಂತ ಹೇಳಿದ್ರು. ದೇವರಿಗೆ ಇವರೇ ಅರ್ಜಿ ಹಾಕಿ ಇಂತಹುವುದೇ ಧರ್ಮ, ಕುಟುಂಬದಲ್ಲಿ ಹುಟ್ಟಿ ಬಂದವರ ರೀತಿ ಮಾತನಾಡುತ್ತಾರೆ. ಆನಂತರ ಯಾವುದೇ ದೇಶದ ಮಹಿಳೆಯನ್ನ ಟಾರ್ಗೆಟ್ ಮಾಡೋದು. ತಬ್ಲಿಘಿ ಜಮಾತ್ ಸಂಬಂಧ ಎಷ್ಟು ಕೋಮು ಟ್ವೀಟ್ ಮಾಡಿದ್ದಾರೆ. ಆದ್ರೀಗ ನ್ಯಾಯಾಲಯ ತಬ್ಲಿಘಿ ಜಮಾತ್ ಗೆ ಕ್ಲೀನ್ ಚಿಟ್ ನೀಡಿದೆ ಎಂದು ತಿಳಿಸಿದರು.
ಯಾರು ತನಿಖೆ ಮಾಡಿ 17 ಜನರನ್ನ ತೆಗೆದು ಹಾಕಿದರು. ತನಿಖೆಯೇ ನಡೆಸದೇ ಉಳಿದವರಿಗೆ ಕ್ಲೀನ್ ಚಿಟ್ ನೀಡಿದ್ದು ಯಾರು? ಇಂತಹ ಥರ್ಡ್ ಕ್ಲಾಸ್ ಗಟರ್ ಮೆಂಟಾಲಿಟಿ ವಿರುದ್ಧ ನಾವು ನಿಂತುಕೊಳ್ಳಬೇಕಿದೆ. ತೇಜಸ್ವಿ ಸೂರ್ಯರಂತ ಕಮ್ಯೂನಲ್ ವೈರಸ್ ಗೂ ವ್ಯಾಕ್ಸಿನ್ ಕಂಡು ಹಿಡಿಯಬೇಕಿದೆ ಎಂದು ಆಕ್ರೋಶ ಹೊರ ಹಾಕಿದರು.