ನವದೆಹಲಿ : ದೇಶದಲ್ಲಿ ಐದು ವಿಧಾನಸಭೆ ಚುನಾವಣೆಗಳು ಅಂತ್ಯವಾಗುತ್ತಿದ್ದಂತೆ ಕೇಂದ್ರದ ಮೋದಿ ಸರ್ಕಾರ ಪೆಟ್ರೋಲ್ ಡಿಸೇಲ್ ಬೆಲೆ ಏರಿಸುವ ತನ್ನ ಹಳೆ ಚಾಳಿ ಮುಂದುವರಿಸಿದೆ. ಕೊರೋನಾ ಕಷ್ಟಕಾಲದಲ್ಲೂ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಮುಂದಿವರಿದ್ದು ಸತತವಾಗಿ 3ನೇ ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ.
ಇಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 18 ಪೈಸೆ, ಪ್ರತಿ ಲೀಟರ್ ಡೀಸೆಲ್ ಬೆಲೆ 31 ಪೈಸೆ ಏರಿಕೆಯಾಗಿದೆ. ಈ ಮೂಲಕ ಬೆಂಗಳೂರುನಲ್ಲಿ ಪೆಟ್ರೋಲ್ 94.01 ರೂ., ಡೀಸೆಲ್ 86.31 ರೂ. ಭೂಪಾಲ್ ನಲ್ಲಿ ಪೆಟ್ರೋಲ್ 98.99 ರೂ., ಡೀಸೆಲ್ 89.68 ರೂ., ಮುಂಬೈನಲ್ಲಿ ಪೆಟ್ರೋಲ್ 97.34 ರೂ., ಡೀಸೆಲ್ 88.49 ರೂ
Price of petrol & diesel in #Delhi at Rs 90.99 per litre and Rs 81.42 per litre respectively today
— ANI (@ANI) May 6, 2021
Petrol & diesel prices per litre – Rs 97.34 & Rs 88.49 in #Mumbai, Rs 92.90 & Rs 86.35 in #Chennai and Rs 91.14 & Rs 84.26 in #Kolkata
(file photo) pic.twitter.com/oNbZLUATAl
ಜೈಪುರ ನಲ್ಲಿ ಪೆಟ್ರೋಲ್ 97.36 ರೂ., ಡೀಸೆಲ್ 89.92 ರೂ., ಪಾಟ್ನಾದಲ್ಲಿ ಪೆಟ್ರೋಲ್ 93.25 ರೂ., ಡೀಸೆಲ್ 86.62 ರೂ., ಚೆನ್ನೈನಲ್ಲಿ ಪೆಟ್ರೋಲ್ 92.90 ರೂ., ಡೀಸೆಲ್ 86.35 ರೂ., ಕೋಲ್ಕತ್ತಾ- ಪೆಟ್ರೋಲ್ 91.14 ರೂ., ಡೀಸೆಲ್ 84.26 ರೂ., ದೆಹಲಿಯಲ್ಲಿ ಪೆಟ್ರೋಲ್ 90.99 ರೂ., ಡೀಸೆಲ್ 81.42 ರೂ., ಲಕ್ನೋದಲ್ಲಿ ಪೆಟ್ರೋಲ್ 89.15 ರೂ., ಡೀಸೆಲ್ 81.79 ರೂ., ರಾಂಚಿಯಲ್ಲಿ ಪೆಟ್ರೋಲ್ 88.35 ರೂ., ಡೀಸೆಲ್ 86.02 ರೂ.ಗೆ ಬೆಲೆ ಏರಿಕೆಯಾಗಿದೆ.
देश #CovidIndia से जूझ रहा है,
— Randeep Singh Surjewala (@rssurjewala) May 6, 2021
पर….
ज़ालिम मोदी सरकार हर रोज़ पेट्रोल-डीज़ल के दाम बढ़ा जनता को लूट रही है।
पेट्रोल-डीज़ल की बढ़ी क़ीमतें वापस लें।https://t.co/7J1QR6zy7y
ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದಂತೆ, ಕೇಂದ್ರ ಸರ್ಕಾರದ ನಡೆಗೆ ಕಾಂಗ್ರೆಸ್ ಕೆಂಡಾಮಂಡಲವಾಗಿದೆ. ದೇಶವು ಕೋವಿಡ್ ಸಂಕಷ್ಟದ ವಿರುದ್ಧ ಹೋರಾಡುತ್ತಿದೆ, ಆದರೆ ಮೋದಿ ಸರ್ಕಾರ ಪ್ರತಿದಿನ ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಿಸುತ್ತಿದೆ, ಪೆಟ್ರೋಲ್- ಡೀಸೆಲ್ ಬೆಲೆ ಏರಿಸಿ ಜನರ ಹಣ ಲೂಟಿ ಮಾಡುತ್ತಿದೆ ವಾಗ್ದಾಳಿ ನಡೆಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ಕೂಡಲೇ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
चुनाव ख़त्म,
— Rahul Gandhi (@RahulGandhi) May 6, 2021
लूट फिर शुरू!#PetrolDieselPriceHike
ಈ ಬಗ್ಗೆ ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವಿಟ್ ಮಾಡಿದ್ದು ಚುನಾವಣೆ ಅಂತ್ಯವಾಗ್ತಿದ್ದಂತೆ ಮತ್ತೆ ಲೂಟಿ ಮಾಡಲು ಕೇಂದ್ರ ಸರ್ಕಾರ ಶುರು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.