ಮುಂಬೈ : ಜೀವ ಬೆದರಿಕೆಯಲ್ಲಿ ಲಂಡನ್‌ಗೆ ಹಾರಿರುವ ಕೋವಿಶೀಲ್ಡ್ ವ್ಯಾಕ್ಸಿನ್ ಉತ್ಪಾದಕ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಅದರ್ ಪೂನವಾಲ್ಲಾ ಭದ್ರತೆ ಕೇಳಿ ಮುಂಬೈ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ತನಗೆ ಭಾರತದಲ್ಲಿ ಜೀವಬೆದರಿಕೆ ಎಂದಿರುವ ಪೂನವಾಲಾ, ತಮ್ಮಗೂ ತಮ್ಮ ಕುಟುಂಬಕ್ಕೆ Z+ ಭದ್ರತೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
A writ petition is filed in Bombay HC seeking Z plus security for Adar Poonawallah and his family. pic.twitter.com/cWsX1V6c0C
— ANI (@ANI) May 6, 2021
ಜೀವ ಬೆದರಿಕೆ ಹಿನ್ನೆಲೆಯಲ್ಲಿ ವಿದೇಶಕ್ಕೆ ಹೋಗಿರುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಿರುವ ಅವರು ಪ್ರಾಣ ಬೆದರಿಕೆ ಹಾಕಿದ ವ್ಯಕ್ತಿಗಳು ಪ್ರಭಾವಿಗಳು ಈ ಹಿನ್ನಲೆ ಭದ್ರತೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ಕೇಂದ್ರ ಸರ್ಕಾರ Y+ ಶ್ರೇಣಿಯ ಭದ್ರತೆಯನ್ನು ಅದರ್ ಪೂನವಾಲ್ಲಾಗೆ ನೀಡಿದೆ. ಯಾವುದೇ ಪೊಲೀಸ್ ದೂರು ನೀಡಿದ ಪೂನವಾಲ್ಲಾ ನೇರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.