ಮುಂಬೈ : ಕೊರೊನಾ ಸೋಂಕು ದಿನದಿಂದ ದಿನಕ್ಕೆ ತೀವ್ರವಾಗುತ್ತಿರುವ ಹಿನ್ನಲೆ ದೇಶದಲ್ಲಿ ನಡೆಯುತ್ತಿರುವ 14 ನೇ ಆವೃತ್ತಿಯ ಮುಂಬರುವ ಎಲ್ಲ ಪಂದ್ಯಗಳನ್ನು ರದ್ದು ಮಾಡಿರುವುದಾಗಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಘೋಷಿಸಿದ್ದಾರೆ.
IPL suspended for this season: Vice-President BCCI Rajeev Shukla to ANI#COVID19 pic.twitter.com/K6VBK0W0WA
— ANI (@ANI) May 4, 2021
ಇಂದು ಹೊರಡಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ ಬಿಸಿಸಿಐ ಈ ಮಾಹಿತಿ ನೀಡಿದೆ. ಕೆಕೆಆರ್ ತಂಡದ ಸದಸ್ಯರಾದ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ಮಧ್ಯಮ ವೇಗಿ ಸಂದೀಪ್ ವಾರಿಯರ್ ಸೇರಿ ಒಟ್ಟು ಒಂಭತ್ತು ಮಂದಿ ಆಟಗಾರರಿಗೆ ಕೊರೊನಾ ಸೋಂಕು ಧೃಡವಾಗಿರುವ ಹಿನ್ನಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಎಪ್ರೀಲ್ 9 ರಿಂದ 14 ಆವೃತ್ತಿಯ ಪಂದ್ಯಗಳು ಆಭವಾಗಿದ್ದವು ಸದ್ಯ 31 ಪಂದ್ಯಗಳು ನಡೆಯಬೇಕಿತ್ತು. ಆಟಗಾರರು ಮತ್ತು ತಾಂತ್ರಿಕ ಸಿಬ್ಬಂದಿಗಳ ಆರೋಗ್ಯ ದೃಷ್ಟಿಯಿಂದ ಕ್ರಮ ವಹಿಸಲಾಗಿದ್ದು ಎಲ್ಲ ಆಟಗಾರರಿಗೆ ಕ್ವಾರಂಟೈನ್ ಆಗುವಂತೆ ಸೂಚಿಸಲಾಗಿದೆ.