ಸೂಪರ್ ಸ್ಪೀಡ್ ನಲ್ಲಿ ಕೊರೊನಾ
ನವದೆಹಲಿ: ದೇಶದಲ್ಲಿ ಕೊರೊನಾ ಅತಿ ವೇಗ ಪಸರಿಸುತ್ತಿದ್ದು, ಲಾಕ್‍ಡೌನ್ ವಿಧಿಸುವ ಬಗ್ಗೆ ಯೋಚಿಸಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಲಾಕ್‍ಡೌನ್ ವಿಧಿಸುವ ಮುನ್ನ ಸರ್ಕಾರಗಳು ರಾಜ್ಯದ ಆರ್ಥಿಕ ಕ್ಷೇತ್ರ ಮತ್ತು ಸಮಾಜದ ಮೇಲೆ ಕಡಿಮೆ ಪರಿಣಾಮ ಬೀರುವ ರೀತಿಯಲ್ಲಿ ನಿಯಮಗಳನ್ನ ಜಾರಿಗೆ ತರಬೇಕಿದೆ. ಲಾಕ್‍ಡೌನ್ ಪರಿಣಾಮದಿಂದ ಸಂಕಷ್ಟದಲ್ಲಿ ಸಿಲುಕುವ ಜನರಿಗಾವಿ ಸರ್ಕಾರಗಳು ವಿಶೇಷ ವ್ಯವಸ್ಥೆ ಮಾಡಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಕೊರೊನಾ ತೀವ್ರತೆಯನ್ನ ಗಮನದಲ್ಲಿಟ್ಟುಕೊಂಡ ಸುಪ್ರೀಂಕೋರ್ಟ್ ಕೆಲವು ಸೂಚನೆಗಳನ್ನು ನೀಡಿದೆ. ರೋಗಿ ಬಳಿ ಯಾವುದೇ ರಾಜ್ಯ/ಕೇಂದ್ರ ನೀಡಿದ ಗುರುತಿನ ಪತ್ರ ಅಥವಾ ಐಟಿ ಇರದಿದ್ರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಕು. ರೋಗಿಗೆ ಚಿಕಿತ್ಸೆ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

ಆಕ್ಸಿಜನ್ ಕೊರತೆ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನ ಮೇ 3ರೊಳಗೆ ಬಗೆಹರಿಸಿಕೊಳ್ಳಬೇಕು. ರಾಜ್ಯಗಳಿಗೆ ಕೇಂದ್ರದ ಆಕ್ಸಿಜನ್ ಪೂರೈಕೆ ಪಾರದರ್ಶಕವಾಗಿರಬೇಕು. ತುರ್ತು ಪ್ರಕರಣಗಳಿಗೆ ಆಮ್ಲಜನಕದ ಸ್ಟಾಕ್ ಇರಬೇಕು ಮತ್ತು ತುರ್ತು ಆಮ್ಲಜನಕ ಹಂಚಿಕೆಯನ್ನ ವಿಕೇಂದ್ರಿಕರಿಸಿ ಎಂದು ಕೇಂದ್ರಕ್ಕೆ ಸುಪ್ರೀಂ ಆದೇಶ ನೀಡಿತ್ತು.