ಬೆಂಗಳೂರು(5-2-2021) :- ದೇಶದ ಗಮನ ಸೆಳೆದಿದ್ದ ತಮಿಳುನಾಡು ವಿಧಾನ ಸಭೆಯ ಚುನಾವಣಣೆಯ ಫಲಿತಾಂಶ ಹೊರಬಿದ್ದಿದ್ದು, ಅಮ್ಮನ ನಾಡಲ್ಲಿ ಸೂರ್ಯೋದಯವಾಗಿದೆ. ತಮಿಳುನಾಡಿನಲ್ಲಿ ಮೊದಲ ಬಾರಿಗೆ ಮೇರು ರಾಜಕಾರಣಿಗಳಾದ ಜಯಲಲಿತಾ ಮತ್ತು ಕರುಣಾನಿಧಿ ಇಲ್ಲದ ಮೊದಲ ಚುನಾವಣೆ ಇದಾಗಿದೆ. ಎಐಎಡಿಎಂಕೆಯ ಅಧೀನಾಯಕಿ ಜಯಲಲಿತಾ ಹಾಗೂ ಡಿಎಂಕೆಯ ಮುಖ್ಯಸ್ಥ ಕರುಣಾನಿಧಿ ಸಾವಿನಪ್ಪಿದ ನಂತರ, ಎಐಎಡಿಎಂಕೆಯಿಂದ ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಡಿಎಂಕೆಯ ಸ್ಟಾಲಿನ್ ನಡುವೆ ನೇರ ಹಣಾಹಣಿ ಇತ್ತು. ಈ ಪ್ರಬಲ ಪೈಪೋಟಿಯಲ್ಲಿ ಎಐಎಡಿಎಂಕೆ ಹಿಡಿತದಲ್ಲಿದ್ದ ದ್ರಾವಿಡನಾಡು ದಶಕದ ನಂತರ ಡಿಎಂಕೆ ಪಾಲಾಗಿದೆ.

ಹಾಗಾದರೆ, ಡಿಎಂಕೆ ಗೆಲುವಿಗೆ ಕಾರಣಗಳು ಯಾವುವು ಎಂದು ನೋಡುವುದಾದರೆ..
ತಮಿಳುನಾಡು ಚುನಾವಣೆಯಲ್ಲಿ ಎಐಡಿಎಂಕೆ ಬಿಜೆಪಿ ಜೊತೆ ಮೈತ್ರಿಮಾಡಿಕೊಂಡಿದ್ದನ್ನೆ ಗುರಿಯಾಗಿಸಿಕೊಂಡ ಡಿಎಂಕೆ ಎಐಎಡಿಎಂಕೆ ಹಾಗೂ ಬಿಜೆಪಿ ವಿರುದ್ಧ ಪ್ರಚಾರ ನಡೆಸಿತ್ತು. ಬಿಜೆಪಿ ಜೊತೆಗಿನ ಮೈತ್ರಿಯನ್ನು ಹಿಂದು,ಹಿಂದುತ್ವ ಎಂದು ಪ್ರಚಾರ ಮಾಡಿ ಇದು ದ್ರಾವಿಡ ಆಸ್ಮಿತೆಗೆ ಧಕ್ಕೆ ಎಂದು ಬಿಂಬಿಸುವಲ್ಲಿ ಡಿಎಂಕೆ ಸಫಲಾಗಿದ್ದು ಗೆಲುವಿಗೆ ಕಾರಣವಾಗಿದೆ.
ತಮಿಳುನಾಡಿನಲ್ಲಿ ಜಯಲಲಿತಾ ಮರಣದ ನಂತರ ಸಮರ್ಥ ನಾಯಕತ್ವದ ಕೊರತೆಯಿತ್ತು. ಜಯಲಲಿತಾ ಜಾಗಕ್ಕೆ ಚಿನ್ನಮ್ಮ ಶಶಿಕಲಾ ಬರುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಬದಲಾದ ಕಾಲದಲ್ಲಿ ಚಿನ್ನಮ್ಮ ಜೈಲು ಸೇರಿದರು. ಇದಾದ ಬಳಕ AIADMK ಸಂಘಟನೆಯಲ್ಲಿ ವಿಫಲವಾಗಿತ್ತು. ಸಮರ್ಥ ನಾಯಕರಿಲ್ಲದೆ ಸಮರ್ಥ ಆಡಳಿತ ನೀಡುವಲ್ಲಿ ಎಐಎಡಿಎಂಕೆ ವಿಫಲವಾಯ್ತು ಪರಿಣಾಮ ಸರ್ಕಾರಿ ವಿರೋಧಿ ಅಲೆ ರಾಜ್ಯದಲ್ಲಿ ಹೆಚ್ಚಾಗಿತ್ತು.
ಡಿಎಂಕೆ ಗೆಲುವಿಗೆ ಸ್ಟಾಲಿನ್ ಚಾಣಕ್ಷತನ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಲಾಗುತ್ತಿದೆ. ಸ್ಟಾಲಿನ್ VCK, MDMK, IUML, ಕಾಂಗ್ರೆಸ್ ,CPI ( M ) ಸೇರಿದಂತೆ ಏಳು ಪಕ್ಷಗಳ ಜೊತೆಗೆ ಮಹಾಮೈತ್ರಿ ಮಾಡಿಕೊಂಡು ಒಗ್ಗಟ್ಟಿನಲ್ಲಿ ಅಖಾಡಕ್ಕೆ ಇಳಿದಿದ್ದು ವರವಾಗಿದೆ. ಅಲ್ಲದೆ, ರಾಜ್ಯದಲ್ಲಿ ಹಿಂದೂಳಿದ, ಸಣ್ಣಸಣ್ಣ ಸಮುದಾಯ, ಮುಸ್ಲಿಂ, ಕ್ರೈಸ್ತ, ದಲಿತ ಮತಗಳ ಕ್ರೂಢಿಕರಣ ಮಾಡುವಲ್ಲಿ ಡಿಎಂಕೆ ಸಫಲವಾಗಿದೆ. ಇಷ್ಟೇ ಅಲ್ಲದೆ, EPS – OPS ಒಳ ಜಗಳ, ಮುಸುಕಿನ ಗುದ್ದಾಟ , ತಮಿಳುನಾಡು ಮತ್ತು ಸರ್ಕಾರ ನಡುವಿನ ಸ್ಪರ್ಧೆ. ಸಾಮಾಜಿಕ ನ್ಯಾಯ, ಹಿಂದಿ ಹೇರಿಕೆ, ರಾಜ್ಯದ ಸ್ವಾಯತ್ತೆ, ಬಿಜೆಪಿ ರಿಮೋಟ್ ಕಂಟ್ರೋಲ್‌ನಲ್ಲಿರುವ ಎಐಎಡಿಎಂಕೆ ಎಂದು ಬಿಂಬಿಸಿದ್ದು ಡಿಎಂಕೆ ಗೆಲುವಿಗೆ ಕಾರಣವಾಗಿದೆ.
ದಶಕದ ನಂತರ ಅಧಿಕಾರಕ್ಕೇರುತ್ತಿರುವ ಡಿಎಂಕೆ ಮೇ 6 ರಂದು ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೇರಲು ಸಿದ್ದತೆ ನಡೆಸುತ್ತಿದೆ.