ಬೆಂಗಳೂರು(5-2-2021) ಇಡೀ ದೇಶದ ಗಮನ ತನ್ನತ್ತ ಸೆಳೆದಿದ್ದ ನಂದಿಗ್ರಾಮ ಗೆದ್ದು ಮಮತಾ ಬ್ಯಾನರ್ಜಿ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಹೈಟ್ರಿಕ್ ಗೆಲುವು ಸಾಧಿಸಿ ಮೂರನೇ ಬಾರಿ ಬಂಗಾಳವನ್ನು 5 ವರ್ಷ ಆಳಲು ಸಜ್ಜಾಗಿದ್ದಾರೆ.

ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಒಮ್ಮೆ ದೀದಿ ಶಿಷ್ಯ ಎಂದು ಹೇಳಲಾಗುತ್ತಿದ್ದ ಸುವೆಂದು ಅಧಿಕಾರಿ ಬಿಜೆಪಿ ಸೇರಿ ದೀದಿ ವಿರುದ್ಧ ಕಣ್ಣಕ್ಕಿಳಿದಿದ್ರು. ಇಬ್ಬರ ಮಧ್ಯೆ ನಡೆದ ರಣರೋಚಕ ಕದನದಲ್ಲಿ ಮಮತಾ ಬ್ಯಾನರ್ಜಿ ಕೊನೆಗೂ 1200 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.
मैं नंदीग्राम जीत गई
— Mamta Banarji (@mamtaofficil) May 2, 2021
ಈ ಬಾರಿ ಪಶ್ಚಿಮ ಬಂಗಾಲದಲ್ಲಿ ದೀದಿ ಮಣಿಸಿಬೇಕೆಂದು ಬಿಜೆಪಿ ಹಲವಾರು ರಣತಂತ್ರ ರೂಪಿಸಿತ್ತು. ರಾಷ್ಟ್ರೀಯ ಘಟಾನುಘಟಿ ನಾಯಕರಾದ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಹಲವಾರು ನಾಯಕರು ಕೊರೊನಾ ಲೆಕ್ಕಿಸದ ಭರ್ಜರಿ ಕ್ಯಾಂಪೇನ್ ಮಾಡಿದ್ದರು. ಇನ್ನು ಸುವೆಂದು ಅಧಿಕಾರಿ ಸಹ ತೀವ್ರ ಪ್ರತಿಸ್ಪರ್ಧೆ ಒಡ್ಡಿದ್ದರು. ಜೊತೆಗೆ ಮಮತಾ ಬ್ಯಾನರ್ಜಿ ಒಂದು ಹಂತದಲ್ಲಿ ಸೋಲು ಕಾಣುತ್ತಾರೆ ಎಂದೇ ಬಿಂಬಿತವಾಗುತಿತ್ತು. ಕೊನೆಗೂ ನಂದಿಗ್ರಾಮದ ಜೊತೆಗೆ ಟಿಎಂಸಿ ಪಕ್ಷ ಪಶ್ಚಿಮ ಬಂಗಾಳದಲ್ಲಿ 200 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮತ್ತೆ ಅಧಿಕ್ಕೇರಲು ಸಿದ್ದವಾಗಿದೆ.