ಪಕ್ಷದ ರಾಜ್ಯ ಕೇರಳದಲ್ಲಿ ಮತ್ತೆ ಎಲ್‌ಡಿಎಫ್ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಿದೆ. ಸಿಎಂ ಪಿಣರಾಯ್ ವಿಜಯನ್ ಎರಡನೇ ಬಾರಿ ಅಧಿಕಾರಕ್ಕೇರುವ ಮೂಲಕ ದಾಖಲೆ ಬರೆಯಲಿದ್ದಾರೆ.
ಮತಎಣಿಕೆ ಪ್ರಾರಂಭದಿಂದಲೂ ಮುನ್ನಡೆ ಸಾಧಿಸಿದ್ದ ಎಲ್‍ಡಿಎಫ್ 99 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ಸತತ ಎರಡನೇ ಬಾರಿ ಗದ್ದುಗೆ ಹತ್ತಲು ಸಜ್ಜಾಗಿದೆ. ಒಟ್ಟು 140 ವಿಧಾನಸಭಾ ಕ್ಷೇತ್ರಗಳಲ್ಲಿ ಯುಡಿಎಫ್ 41 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ರಾಷ್ಟ್ರದ ಬಹುತೇಕ ಅಧಿಕಾರದಲ್ಲಿರುವ ಬಿಜೆಪಿ ಕೇರಳದಲ್ಲಿ ಇಂದು ಖಾತೆ ತೆರೆಯುವಲ್ಲಿ ವಿಫಲವಾಗಿದೆ.

ಈ ಬಾರಿ ಕೇರಳದಲ್ಲಿ ಸ್ಥಾನಗಳನ್ನಾದರೂ ಬಿಜೆಪಿ ಗೆಲ್ಲಬೇಕೆಂದು ಪಣತೊಟ್ಟಿತ್ತು. ಹೀಗಾಗಿ, ನಮ್ಮ ರಾಜ್ಯದ ಡಿಸಿಎಂ ಅಶ್ವತ್ಥ ನಾರಾಯಣ ಸೇರಿದಂತೆ ಹಲವು ನಾಯಕರು ಪ್ರಚಾರ ನಡೆಸಿದ್ದರು. ಇನ್ನು, ಈ ಬಾರಿ ಕೇರಳದಲ್ಲಿ ಸದ್ದು ಮಾಡಿದ್ದ ಮೆಟ್ರೋ ಮ್ಯಾನ್ ಶ್ರೀಧರನ್ ಅವರು ಪಾಲಕ್ಕಾಡ್‍ನಲ್ಲಿ ಮುನ್ನಡೆ ಸಾಧಿಸಿದ್ದರು. ಕೊನೆಯ ಸುತ್ತುಗಳಲ್ಲಿ ಕಾಂಗ್ರೆಸ್ ಶಫಿ ಪರಂಬಿಗೆ ಮುನ್ನಡೆ ಸಿಕ್ಕಿದ್ದರಿಂದ ಶ್ರೀಧರನ್ ಅವರಿಗೆ ಸೋಲಾಗಿದೆ.