ಭಾರತದಲ್ಲಿ ಕೊರೊನಾ ಎರಡನೇ ಅಲೆ ಮೀತಿ ಮೀರುತ್ತಿದ್ದು, ಭಾರತವನ್ನು ಸಂಪೂರ್ಣ ಲಾಕ್‌ಡೌನ್ ಮಾಡುವಂತೆ ಡಾ. ಆಂಥೋನಿ ಎಸ್ ಫೌಸಿಯವರು ಸಲಹೆ ನೀಡಿದ್ದಾರೆ. ಡಾ. ಆಂಥೋನಿ ಎಸ್ ಫೌಸಿ, ಜೊ ಬಿಡೆನ್ ಆಡಳಿತದ ಮುಖ್ಯ ವೈದ್ಯಕೀಯ ಸಲಹೆಗಾರರಾಗಿದ್ದು, ಅಮೇರಿಕಾದ ಏಳು ಅಧ್ಯಕ್ಷರೊಂದಿಗೆ ಕೆಲಸ ಮಾಡಿರುವ ತಜ್ಞ ವೈದ್ಯರಾಗಿದ್ದಾರೆ.

ಯಾವುದೇ ರಾಷ್ಟ್ರವು ತನ್ನನ್ನು ತಾನೇ ಲಾಕ್ ಮಾಡಲು ಇಷ್ಟಪಡುವುದಿಲ್ಲ. ಆದರೆ ಭಾರತದಲ್ಲಿ ಕೊರೊನಾದಿಂದ ಪರಿಸ್ಥಿತಿ ಹದಗೆಟ್ಟಿದೆ. ನಾಲ್ಕೈದು ವಾರಗಳ ತಕ್ಷಣದ ಲಾಕ್‌ಡೌನ್ ಅವಶ್ಯಕತೆ ಇದೆ. ಲಾಕ್‌ಡೌನ್ ಮಾಡಿ ಸೋಂಕಿತರಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬೇಕು. ಲಾಕ್‌ಡೌನ್‌ನಿಂದ ಮಾತ್ರ ಪರಿಣಾಮಕಾರಿ ಚೈನ್ ಲಿಂಕ್ ಬ್ರೇಕ್ ಮಾಡಲು ಸಾಧ್ಯವಾಗುತ್ತದೆ. ಸದ್ಯ ಸಂಕಷ್ಟ ಪರಿಸ್ಥಿತಿಯಿಂದ ಹೊರ ಬರಲು ಇದೊಂದೇ ದಾರಿ ಎಂದು ಹೇಳಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಎರುಡು ಮಾರ್ಗಗಳು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಮೊದಲನೇಯದು, ತುರ್ತು ಕಾರ್ಯಗಳು ಮತ್ತೊಂದು ಸುದೀರ್ಘ ಸಮಯಕ್ಕೆ ಸೋಂಕು ನಿಯಂತ್ರಣ ಮಾಡುವುದು ಕುರಿತು ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಲಾಕ್‌ಡೌನ್ ಮಾಡುವ ಮೂಲಕ ಸರ್ಕಾರದ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್, ಔಷಧಿಗಳನ್ನು ಹೆಚ್ಚಿಸಿಕೊಳ್ಳಬೇಕು. ವ್ಯಾಕ್ಸಿನ್ ನೀಡುವ ಮೂಲಕ ಭವಿಷ್ಯದಲ್ಲಿ ಕೊರೊನಾದಿಂದ ಜನರನ್ನು ರಕ್ಷಿಸಬೇಕು ಎಂದು ಡಾ. ಆಂಥೋನಿ ಎಸ್ ಫೌಸಿಯವರು ಸಲಹೆ ನೀಡಿದ್ದಾರೆ.