ಬೆಂಗಳೂರು: ಕೊರೊನಾದಿಂದ ಮೃತರ ಕುಟುಂಬಸ್ಥರ ಕೈ ಹಿಡಿದು ಸಮಾಧಾನ ಪಡಿಸೋದನ್ನ ಈ ಮಾಹಾಮಾರಿ ಕಿತ್ತುಕೊಂಡಿದೆ. ನೊಂದ ಜೀವಕ್ಕೆ ಹೆಗಲು ನೀಡೋದು ಆಸರೆಯ ಪ್ರತೀಕ. ಆದ್ರೆ ಕೊರೊನಾ ಎಲ್ಲ ಮಾನವೀಯ ಮೌಲ್ಯಗಳ ಸಂಹಾರಕ್ಕೆ ಮುಂದಾಗಿದೆ. ನಿರ್ಮಾಪಕ ರಾಮು ಸಹ ಕೊರೊನಾಗೆ ಬಲಿಯಾಗಿದ್ದು, ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಮಾಲಾಶ್ರೀ ಜೊತೆ ತೆರೆಹಂಚಿಕೊಂಡಿದ್ದ ಹಿರಿಯ ನಟ ಜಗ್ಗೇಶ್ ಸಹ ರಾಮು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಮೇಡಂ ನಿಮ್ಮ ಸಂಕಷ್ಟದಲ್ಲಿ ಭಾಗಿ ಆಗುವ ಯೋಗ್ಯತೆ ಇಲ್ಲದಂತೆ ಮಾಡಿದ ಈ ಸಮಯಕ್ಕೆ ತಲೆಬಾಗಿ ಕ್ಷಮೆ ಕೋರುವೆ. ತಮ್ಮ ನೋವಿಗೆ ಸಾಂತ್ವನ ಹೇಳುವ ಶಕ್ತಿಮಾತ್ರ ಉಳಿದಿದೆ. ಕನ್ನಡ ಚಿತ್ರರಂಗಕ್ಕೆ ಅನನ್ಯ ಸೇವೆ ಮಾಡಿ ಅನೇಕ ಚಿತ್ರರಂಗದ ಕಾರ್ಮಿಕರಿಗೆ ಅನ್ನ ನೀಡಿದ ಮಹನೀಯ ನನ್ನ ತಮ್ಮ ರಾಮು. ಅವನ ಆತ್ಮಕ್ಕೆ ಶಾಂತಿಕೋರಿ ನಿಮ್ಮ ಮನೆಯಲ್ಲೆ ರಾಮು ಹುಟ್ಟಿಬರಲಿ ಎಂದು ರಾಯರಲ್ಲಿ ಪ್ರಾರ್ಥನೆ.
ದಯಮಾಡಿ ನೀವು ಧೈರ್ಯದಿಂದ ಈ ಸಂಕಷ್ಟ ಎದುರಿಸಿ ಮಕ್ಕಳನ್ನು ರಾಮು ಎತ್ತರಕ್ಕೆ ಬೆಳಸಿ. ನಿಮ್ಮ ಜೊತೆ ನಾವು ಉದ್ಯಮದ ಎಲ್ಲಾ ಸ್ನೆಹಿತರು ಸದಾ ಇರುತ್ತೇವೆ. ಮುಂದಿನ ಸಾಂಸಾರಿಕ ಜೀವನ ನಿಭಾಯಿಸುವ ಶಕ್ತಿ ರಾಯರು ನಿಮಗೆ ನೀಡಲಿ ನಿಮ್ಮ ಕಲಾಬಂಧು ಎಂದು ಬರೆದುಕೊಂಡಿದ್ದಾರೆ.