ರಾಜ್ಯದಲ್ಲಿಂದು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 48,296 ಜನರಿಗೆ ಸೋಂಕು ತಗುಲಿದೆ. ಕೋವಿಡ್ ಸೋಂಕಿಗೆ ಇಂದು 217 ಜನ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ತಿಳಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿ 26756 ಜನರಿಗೆ ಕೊರೊನಾ ಸೋಂಕು ಧೃಢಪಟ್ಟಿದೆ. ಬೆಂಗಳೂರು ನಗರದಲ್ಲಿ ಸೋಂಕಿಗೆ 93 ಜನ ಅಸುನೀಗಿದ್ದಾರೆ. ಇನ್ನು, ಜಿಲ್ಲೆಗಳಲ್ಲಿಯೂ ಕೊರೊನಾ ಸಾವಿರ ಸಂಖ್ಯೆ ದಾಟಿದ್ದು, 1282, ದಕ್ಷಿಣ ಕನ್ನಡದಲ್ಲಿ 1205, ಕಲಬುರಗಿಯಲ್ಲಿ 1256, ಮಂಡ್ಯದಲ್ಲಿ 1348, ಮೈಸೂರಿನಲ್ಲಿ, 3500, ತುಮಕೂರಿನಲ್ಲಿ 1801, ಹಾಸನದಲ್ಲಿ 709 ಜನರಿಗೆ ಕೊರೊನಾ ಸೋಂಕು ಧೃಢಪಟ್ಟಿದೆ.

ಇನ್ನು, ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವವರ ಸಂಖ್ಯೆ 14884 ಜನ. ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 3,82,690 ಏರಿಕೆಯಾಗಿದೆ. ಈವರೆಗೂ ರಾಜ್ಯದಲ್ಲಿ ಒಟ್ಟು 1523142 ಮಂದಿ ಸಾವನ್ನಪ್ಪಿದ್ದು ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ರೇಟ್ 25.44% ರಷ್ಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.