ನವದೆಹಲಿ : ಡ್ರೋನ್ ಮೂಲಕ ವ್ಯಾಕ್ಸಿನ್ ವಿತರಣೆ ತೆಲಂಗಾಣ ಸರ್ಕಾರಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಷರತ್ತು ಬದ್ದ ಅನುಮತಿ ನೀಡಿದ್ದು, ವೈದ್ಯಕೀಯ ಲೋಕದಲ್ಲೆ ಇದೇ ಮೊದಲ ಬಾರಿ ವಿನೂತನ ಪ್ರಯತ್ನವೊಂದು ನಡೆಯಲಿದೆ.
ಇಂದು ತೆಲಂಗಾಣ ಸರ್ಕಾರಕ್ಕೆ ಈ ಅನುಮತಿ ಸಿಕ್ಕಿದ್ದು, ಮೂರನೇ ಹಂತದ ಲಸಿಕಾ ಅಭಿಯಾನದಲ್ಲಿ ವ್ಯಾಕ್ಸಿನ್ ಸೆಂಟರ್ ಗಳಿಗೆ ಡ್ರೋನ್ ಮೂಲಕ ಲಸಿಕೆ ವಿತರಣೆ ಮಾಡಬಹುದು ಎಂದು ಹೇಳಿದೆ.

ಡ್ರೋನ್ ಬಳಕೆಗೆ ಹಲವು ಷರತ್ತುಗಳನ್ನು ಕೇಂದ್ರ ಸರ್ಕಾರ ಹಾಕಿದ್ದು ಡ್ರೋನ್ ರಿಮೋಟ್ ಕಂಟ್ರೋಲ್ ಏರಿಯಾದಲ್ಲಿರಬೇಕು, ಸೂಕ್ತ ಭೌಗೋಳಿಕ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ವಿಷುಯಲ್ ಲೈನ್ ಆಫ್ ಸೈಟ್ ನಲ್ಲಿ ಡ್ರೋನ್ ಕಾರ್ಯಚರಣೆ ನಡೆಬೇಕು ಎಂದು ಸೂಚನೆ ನೀಡಿದೆ.
Ministry of Civil Aviation & DGCA have granted conditional exemption for drone deployment to the Telangana Govt. The drone usage permission has been granted for conducting experimental delivery of Covid-19 vaccines within Visual Line of Sight)Range using drones pic.twitter.com/tZeJsKCUWS
— ANI (@ANI) April 30, 2021
ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸಲು ಈ ಅನುಮತಿ ನೀಡಿದ್ದು ಒಂದು ವರ್ಷಗಳ ಕಾಲ ಲಸಿಕೆ ಹಂಚಿಕೆಗೆ ಡ್ರೋನ್ ಬಳಿಕೆ ಮಾಡಬಹುದಾಗಿದೆ. ಇದಕ್ಕೂ ಮೊದಲು ಐಐಟಿ ಕಾನ್ಪುರ ವಿದ್ಯಾರ್ಥಿಗಳು ಸಿದ್ದಪಡಿಸಿದ್ದ ಡ್ರೋನ್ ಬಳಕೆಗೆ ಐಸಿಎಂಆರ್ ಗೆ ಅನುಮತಿ ನೀಡಲಾಗಿತ್ತು.