ಮೂಗಿಗೆ ನಿಂಬೆಹಣ್ಣಿನ ರಸ ಹಾಕಿದ್ರೆ ಕೊರೊನಾ ಮುಕ್ತರಾಗಬಹುದು ಎಂದು ಹೇಳಿದ್ದ ಉದ್ಯಮಿ ವಿಜಯ ಸಂಕೇಶ್ವರ್ ಹೇಳಿಕೆಯನ್ನು ಮೈಸೂರು ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.

ವಿಜಯ್ ಸಂಕೇಶ್ವರ್‌ರವರು ಭಾರತೀಯ ಚಿಕಿತ್ಸಾ ಪದ್ಧತಿ ಪ್ರಕಾರ ತುಳಸಿ, ಬಿಲ್ವಪತ್ರೆ, ಬೇವು, ಅರಿಶಿಣ, ನಿಂಬೆಹಣ್ಣಿನ ಕುರಿತು ಹೇಳಿದ್ದಾರೆ. ಅವರೇನು ಇದೇ ಕೊರೊನಾಗೆ ಚಿಕಿತ್ಸೆ ಎಂದು ಹೇಳಿಲ್ಲ. ಆದರೆ, ಹುಳಕನ್ನೆ ಹುಡುವ ಮನಸ್ಥಿತಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಟ್ರಾನ್ಸ್ ಪೋರ್ಟ್ ಉದ್ಯಮದ ಮುಖಾಂತರವಾಗಿ ಸಾವಿರಾರು ಜನಕ್ಕೆ ಅನ್ನ ಹಾಕುತ್ತಿರುವಂತಹ ಹಾಗೂ ವಿಜಯ ಕರ್ನಾಟಕದ ಆರಂಭದ ಮುಖಾಂತರವಾಗಿ ಪತ್ರಿಕೋದ್ಯಮದಲ್ಲೂ ಕೂಡ 21ನೇ ಶತಮಾನದಲ್ಲಿ ಕ್ರಾಂತಿಯನ್ನು ತಂದಂತಹ ಧೀಮಂತ ವ್ಯಕ್ತಿ ಎಂದು ಮೈಸೂರಿನಲ್ಲಿ ಪ್ರತಾಪ ಸಿಂಹ ಹೇಳಿದ್ದಾರೆ.
ವಿಜಯ್ ಸಂಕೇಶ್ವರ್ ರವರು ಟ್ರಾನ್ಸ್ ಪೋರ್ಟ್ ಉದ್ಯಮದ ಮುಖಾಂತರವಾಗಿ ಸಾವಿರಾರು ಜನಕ್ಕೆ ಅನ್ನ ಹಾಕುತ್ತಿರುವಂತಹ ಹಾಗೂ ವಿಜಯ ಕರ್ನಾಟಕದ ಆರಂಭದ ಮುಖಾಂತರವಾಗಿ ಪತ್ರಿಕೋದ್ಯಮದಲ್ಲೂ ಕೂಡ 21ನೇ ಶತಮಾನದಲ್ಲಿ ಕ್ರಾಂತಿಯನ್ನು ತಂದಂತಹ ಧೀಮಂತ ವ್ಯಕ್ತಿ. pic.twitter.com/tGoa70hQIi
— Pratap Simha (@mepratap) April 29, 2021
ಇನ್ನು, ಮೋದಿ ಬಗ್ಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಮೋದಿ ಸೂರ್ಯ ಇದ್ದಂತೆ, ರ್ಯನ ಕಡೆ ಮುಖ ಮಾಡಿ ಉಗುಳಿದರೆ ಅವರ ಮುಖಕ್ಕೆ ಉಗುಳು ಬಿದ್ದಂತೆ ಎಂದು ಟೀಕಾಕಾರಿಗೆ ತಿರುಗೇಟು ನೀಡಿದ್ದಾರೆ.