ನವದೆಹಲಿ: ಭಾರತದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಗುರುವಾರ 24 ಗಂಟೆಗಳ ಅಂತರದಲ್ಲಿ 3,79,257 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 1,83,76,524ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 30,84,814 ಆಗಿದ್ದು, ಒಟ್ಟು ಪ್ರಕರಣಗಳ ಪೈಕಿ ಶೇ 16.79ರಷ್ಟಿದೆ.
#CoronaVirusUpdates:
— #IndiaFightsCorona (@COVIDNewsByMIB) April 29, 2021
📍#COVID19 India Tracker
(As on 29 April, 2021, 08:00 AM)
➡️Confirmed cases: 1,83,76,524
➡️Recovered: 1,50,86,878 (82.10%)👍
➡️Active cases: 30,84,814 (16.79%)
➡️Deaths: 2,04,832 (1.11%)#IndiaFightsCorona#Unite2FightCorona#StaySafe @MoHFW_INDIA pic.twitter.com/EONYuhIRnl
ಇನ್ನು, ಕೊರೊನಾ ಸೋಂಕಿಗೆ ಇಂದು ಬೆಳಗ್ಗೆ 8ರವರೆಗೂ 3,645 ಮಂದಿ ಮೃತಪಟ್ಟಿದ್ದಾರೆ. ಕೋವಿಡ್‌ನಿಂದ ಈವರೆಗೂ 2,04,832 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇನ್ನು ಕರ್ನಾಟಕ ಹಾಗೂ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕದಲ್ಲಿ 39,000 ಪ್ರಕರಣಗಳು ದಾಖಲಾಗಿದ್ರೆ, ಪಶ್ಚಿಮ ಬಂಗಾಳದಲ್ಲಿ 17,207 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 229 ಮಂದಿ ಮೃತಪಟ್ಟಿದ್ರೆ, ಮಹಾರಾಷ್ಟ್ರದಲ್ಲಿ 1,035 ಜನ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ 368, ಛತ್ತೀಸ್‌ಗಢದಲ್ಲಿ 279, ಉತ್ತರ ಪ್ರದೇಶದಲ್ಲಿ ಮೃತಪಟ್ಟಿದ್ದಾರೆ.
#IndiaFightsCorona:
— #IndiaFightsCorona (@COVIDNewsByMIB) April 29, 2021
📍 Highest number of #ActiveCases in several states of India (as on 29th April, 2021 till 08:00 AM)
☑️ Follow #COVIDAppropriateBehaviour to #StaySafe#Unite2FightCorona pic.twitter.com/9qqtQ6Lphw