ಮಂಗಳೂರಿನಲ್ಲಿ ವೈದ್ಯೆಯಾಗಿದ್ದ ಮಾಹಾಬಷೀರಾ
ಎಂಟು ತಿಂಗಳ ಹಿಂದೆ ಮದ್ವೆಯಾಗಿದ್ದ ವೈದ್ಯೆ
ಮಂಗಳೂರು: ಕೊರೊನಾ ಸೋಂಕಿಗೆ ತುತ್ತಾಗಿದ್ದ ಮಂಗಳೂರಿನ 27 ವರ್ಷದ ವೈದ್ಯೆ ಮಾಹಾಬಷೀರಾ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಮಹಾಬಷೀರಾ ಕೇರಳದ ತಲಶೇರಿಯ ಮೂಲದವರಾಗಿದ್ದು, ಮಂಗಳೂರಿನ ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಎಂಟು ತಿಂಗಳ ಹಿಂದೆ ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯ ವೈದ್ಯ ಮೊಹಮ್ಮದ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಆರು ತಿಂಗಳು ಗರ್ಭಿಣಿ ಮಾಹಾಬಷೀರಾ ಹಾಗೂ ಪತಿ ಮೊಹಮ್ಮದ್ ಅವರಿಗೂ ಕೊರೊನಾ ಸೋಂಕು ತಗುಲಿತ್ತು, ಇಬ್ಬರು ಇಂಡಿಯಾನಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದ್ರೆ ಉಸಿರಾಟ ತೊಂದರೆಯಿಂದ ಮಹಾಬಷೀರಾ ಇಂದು ನಿಧನರಾಗಿದ್ದಾರೆ.