32 ವರ್ಷ ಹಿಂದೆ ನೀಡಿದ ಫೋಟೋ ಹೇಗಿದೆ ಗೊತ್ತಾ?
ಬೆಂಗಳೂರು: ನವರಸ ನಾಯಕ ಜಗ್ಗೇಶ್ ಪಡೆದ ಸಹಾಯವನ್ನ ಮರೆಯದ ವ್ಯಕ್ತಿ. ಅದರ ಜೊತೆಗೆ ತನ್ನಿಂದ ಎಷ್ಟೋ ಸಾಧ್ಯವೋ ಅಷ್ಟು ಬೇರೆಯವರಿಗೆ ಉಪಕಾರ ಆಗಲಿ ಅನ್ನೋ ಒಳ್ಳೆ ಮನಸ್ಸಿನ ದೈವ ಭಕ್ತ. ನೀವು ಜಗ್ಗೇಶ್ ಮಾತು ಕೇಳಿದ್ರೆ ಅದರಲ್ಲಿ ನೂರು ಬಾರಿ ರಾಯರನ್ನ ನೆನಪು ಮಾಡಿಕೊಳ್ಳುತ್ತಾರೆ. ತಮಗೆ 32 ವರ್ಷಗಳ ಹಿಂದೆ ಕಲಾವಿದ ವಾಜಿದ್ ಸಾಜಿದ್ ಅವರು ನೀಡಿದ ಗುರು ರಾಘವೇಂದ್ರ ಚಿತ್ರದ ವಿಸ್ಮಯಗಳನ್ನ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ನಟ ಕೋಮಲ್ ಕೊರೊನಾದಿಂದ ಗುಣಮುಖರಾಗಿ ಚೇತರಿಸಿಕೊಳ್ಳುತ್ತಿರುವ ವಿಷಯ ತಿಳಿದ ವಾಜಿದ್ ಸಾಜಿದ್, ವಿಷಯ ತಿಳಿದು ಹೃದಯ ತುಂಬಿ ಬಂದಿತು. ಆ ದೇವರು ಅವರ ಆರೋಗ್ಯ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ ಜಗ್ಗೇಶ್, ನೀವು 32 ವರ್ಷದ ಬೆಳವಣಿಗೆಯಲ್ಲಿ ನೀವು ನೀಡಿದ ಈ ಫೋಟೋ ಮೂಲಕ ಅನೇಕ ಪವಾಡ ಆಗಿದೆ. ಅದರಲ್ಲಿ ಕೋಮಲ್ ಉದಾಹರಣೆಯೂ ಒಂದು. ನಿಮ್ಮ ನೆನಪಿನ ಪ್ರೀತಿಗೆ ಧನ್ಯವಾದ ತಿಳಿಸಿದ್ರು.

ನೀವು ನೀಡಿದ ಈ ಫೋಟೋ ಮುಟ್ಟಿ ನಮಸ್ಕಾರ ಮಾಡುವಾಗ ಇದನ್ನ ರಚಿಸಿದ ನಿಮಗೂ ನಮಸ್ಕಾರ ಮಾಡುವೆ. ಕಾರಣ ಅರ್ಜುನನಿಗೆ ಶ್ರೀಕೃಷ್ಣ ಸಿಕ್ಕಂತೆ ನನ್ನ ಬದುಕಿಗೆ ಈ ಫೋಟೋ ನಿಮ್ಮಿಂದ ಸಿಕ್ಕಿತು. ಕಾಲ ಬಂದಾಗ ಭೇಟಿ ಆಗುವೆ. ಈ ಫೋಟೋದಿಂದ ಆಗುವ ವಿಸ್ಮಯ ನೇರವಾಗಿ ವಿವರಿಸುವೆ ಎಂದು ತಿಳಿಸಿದ್ದಾರೆ.

ಕೋಮಲ್ ಅನಾರೋಗ್ಯ ವಿಷಯ ಹೇಳಿದ್ರು: ನಾನು ಇಷ್ಟುದಿನ ಮುಚ್ಚಿಟ್ಟು ಪಡುತ್ತಿದ್ದ ಯಾತನೆ ರಾಯರಿಗೆ ಮಾತ್ರ ಗೊತ್ತು. ಭಕ್ತನ ಗುರುಗಳ ನಡುವೆ ನಡೆದಿತ್ತು ಭಾವನಾತ್ಮಕ ಭಕ್ತಿಯ ಬೇಡಿಕೆ. ಅದು ಒಂದೆ ರಾಯರೆ ನಾನು ಕಾಯವಾಚಮನ ಸತ್ಯವಾಗಿ ನಡೆದುಕೊಂಡಿದ್ದರೆ, ಹೃದಯದಿಂದ ಒಳ್ಳೆಯತನ ಅನುಸರಿಸಿದ್ದರೆ, ಮನುಷ್ಯ ಪಕ್ಷಿ ಪ್ರಾಣಿಯ ಆತ್ಮದಲ್ಲಿ ಸಮಾನವಾಗಿ ದೇವರಿದ್ದಾನೆ ಎಂದು ನಂಬಿದ್ದರೆ, ಯಾರಿಗೂ ಕೇಡು ಬಯಸದೆ ಮೋಸ ವಂಚನೆ ಅನ್ಯಾಯ ಮಾರ್ಗದಲ್ಲಿ ನಡೆದು ನೊಂದವರಿಗೆ ನಂಬಿದವರಿಗೂ ಭುಜಕೊಟ್ಟು ಬದುಕಿದ್ದರೆ, ನನ್ನ ತಂದೆ-ತಾಯಿಯನ್ನು ನೋಹಿಸದೆ ಉತ್ತಮ ಮಗನಂತೆ ಸಂತೈಸಿದ್ದರೆ, ಅನ್ನಕೊಟ್ಟ ಶಾರದೆ ಸೇವೆ ನಿಷ್ಠೆಯಿಂದ ಮಾಡಿದ್ದರೆ, ಕಾಯಕ ಮಾಡುವ ಎಲ್ಲಾ ಕ್ಷೇತ್ರದಲ್ಲೂ ಪ್ರಾಮಾಣಿಕನಾಗಿದ್ದರೆ, ರಾಯರು ನನ್ನ ಹೃದಯಲ್ಲಿದ್ದರೆ ಸಾವಿನ ಮನೆ ಕದತಟ್ಟುತ್ತಿರುವ ನನ್ನ ತಮ್ಮನಿಗೆ ಸಾವು ಗೆಲ್ಲುವ ಶಕ್ತಿ ನೀಡಿ.
ನಾನು ಈ ಪೋಟೋ ಮುಟ್ಟಿ ನಮಸ್ಕಾರ ಮಾಡುವಾಗ ಇದ ರಚಿಸಿದ ನಿಮಗು ನಮಸ್ಕಾರ ಮಾಡುವೆ ಕಾರಣ ಅರ್ಜುನಗೆ ಶ್ರೀಕೃಷ್ಣ ಸಿಕ್ಕಂತೆ ನನ್ನ ಬದುಕಿಗೆ ಈ ಪೋಟೋ ನಿಮ್ಮಿಂದ ಸಿಕ್ಕಿತು!ಕಾಲಬಂದಾಗ ಬೇಟಿಯಾಗುವ ಇದರಿಂದ ಆಗುವ ವಿಸ್ಮಯ ನೇರವಾಗಿ ವಿವರಿಸುವೆ 🙏❤@WajidSajid6 https://t.co/traJBhCxcA pic.twitter.com/4d0qEaQ89J
— ನವರಸನಾಯಕ ಜಗ್ಗೇಶ್ (@Jaggesh2) April 28, 2021
ಕೋಮಲ್ ಈಸ್ ಸೇಫ್: ರಾಯರು ನನ್ನ ಬೇಡಿಕೆಗೆ ಬೃಂದಾವನದಿಂದ ಎದ್ದು ಬಂದು ಪಕ್ಕನಿಂತು ಅವನ ಉಳಿಸಿಬಿಟ್ಟರು. ಕೋಮಲ್ ಈಸ್ ಸೇಫ್. ಚಿತ್ರರಂಗದಲ್ಲಿ ಸಂಕಷ್ಟ ಅನುಭವಿಸಿದ ಕೋಮಲ್ ಸ್ವಾಭಿಮಾನದಿಂದ ಬದುಕಲು ಸ್ವಂತ ವ್ಯವಹಾರ ಬೆಂಗಳೂರಿನ ಕಾರ್ಪೊರೇಷನ್ ನಲ್ಲಿ ಶುರುಮಾಡಿ ಯಶಸ್ವಿಯಾದ. ಆದರೆ ಇತ್ತೀಚೆಗೆ ತನಗೆ ಬರಬೇಕಾದ ಬಿಲ್‍ಗೆ ಅಲ್ಲಿನ ಕೆಲ ಲಂಚಬಾಕ ಅಧಿಕಾರಿಗಳು ಹಣಕ್ಕೆ ಪೀಡಿಸಿ ಅಲೆಸಿಬಿಟ್ಟರು. ಅದನ್ನು ಪಡೆಯಲು ದಿನ ಓಡಾಡುತ್ತಿದ್ದ ತಮ್ಮನಿಗೆ ಕೊರೊನಾ ಮಾರಿ ಮೈಸೇರಿ ತುಂಬಾ ಸೀರಿಯಸ್ ಆಗಿಬಿಟ್ಟ. ದೇವರಿಗೆ ಗೊತ್ತು ನಾನು ಎಲ್ಲರಿಂದ ಮುಚ್ಚಿಟ್ಟು ಅಣ್ಣನಾಗಿ ಅವನ ಉಳಿಸಿಕೊಂಡ ಕಷ್ಟ. ಅವನಿಗೆ ಸಹಾಯ ಮಾಡಿದ ಡಾ. ಮಧುಮತಿ, ನಾದನಿ ಡಾ ಲಲಿತ ನರ್ಸ್ ಗಳ ಪಾದಕ್ಕೆ ನನ್ನ ನಮನ, ರಾಯರೆ ಎಂದು ಜಗ್ಗೇಶ್ ಸರಣಿ ಟ್ವೀಟ್ ಮಾಡಿದ್ದಾರೆ.
ನೀವು ತಾಯಿ ಶಾರದೆ ಸಂಜಾತ!
— ನವರಸನಾಯಕ ಜಗ್ಗೇಶ್ (@Jaggesh2) April 28, 2021
ನಿಮಗೆ ಅಲ್ಲಾಹುವಿನ ಸಂಪೂರ್ಣ ಆಶೀರ್ವಾದ ಸಿಕ್ಕಿದೆ
ಹಾಗು ನೀವು ಹಿಂದಿನಜನ್ಮದ ನನ್ನಬಂಧು ಅಥವ ಮಿತ್ರ!ಇಲ್ಲದಿದ್ದರೆ ಗಾಂಧಿನಗರ ಗಲ್ಲಿಯಲ್ಲಿ1989ಸಿಕ್ಕಿ ಅದ್ಭುತ ಪವಾಡಬಿಂಧು ರಾಯರ ಚಿತ್ರ ನನಗೆ ಏಕೆಕೊಟ್ಟಿರಿ?ಇದೆಲ್ಲಾ ರಾಯರ ಪೂರ್ವನಿರ್ಧಾರಿತ ಕೃಪೆ
ನಿಮ್ಮಚಿತ್ರ ಪಾಂಡವರ ಅಕ್ಷೋಣಿ ಸೈನ್ಯ ಶ್ರೀಕೃಷ್ಣನಂತೆ ನನಗೆ🙏 https://t.co/58iXrFx4nA