ನವದೆಹಲಿ : ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮೂರನೇ ಹಂತದ ವ್ಯಾಕ್ಸಿನ್ ಅಭಿಯಾನ ನಡೆಸಲಿರುವ ಸರ್ಕಾರ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕಾಗಿ ದೊಡ್ಡ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಮಾಡುವ ಉದ್ದೇಶ ಹೊಂದಿದೆ.
18ವರ್ಷ ಮೇಲ್ಪಟ್ಟ ಎಲ್ಲರಿಗೂ ಘೋಷಣೆ ಬೆನ್ನಲೆ ಸೋಶಿಯಲ್ ಮಿಡಿಯಾಗಳಲ್ಲಿ ಐಪಿಎಲ್ ಆಟಗಾರರಿಗೆ ವ್ಯಾಕ್ಸಿನ್ ನೀಡುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಐಪಿಎಲ್ ಆಡುತ್ತಿರುವ ಆಟಗಾರರು ವ್ಯಾಕ್ಸಿನ್ ಪಡೆಯಲಿದ್ದರಾ ಎಂದು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ ಈಗ ಬಿಸಿಸಿಐ ಸ್ಪಷ್ಟನೆ ನೀಡಿದ್ದು ವ್ಯಾಕ್ಸಿನ್ ಪಡೆಯುವ ನಿರ್ಧಾರ ಆಟಗಾರರಿಗೆ ಬಿಟ್ಟದ್ದು ಎಂದು ಹೇಳಿದೆ. ವ್ಯಾಕ್ಸಿನ್ ಪಡೆಯುವ ಬಗ್ಗೆ ಬಿಸಿಸಿಐನಿಂದ ಯಾವುದೇ ಒತ್ತಡಗಳಿಲ್ಲ, ಅದು ಆಟಗಾರರ ವೈಯುಕ್ತಿಕ ವಿಚಾರಕ್ಕೆ ಬಿಟ್ಟದ್ದು ಅದನ್ನು ಅವರೇ ನಿರ್ಧರಿಸಲಿದ್ದಾರೆ. ಲಸಿಕೆ ಪಡೆಯುವ ಮನಸ್ಸಿದ್ದಲ್ಲಿ ಅವರು ಮೇ 1ರ ಬಳಿಕ ಪಡೆಯಲಿದ್ದಾರೆ ಎಂದು ಬಿಸಿಸಿಐ ಹೇಳಿದೆ.

ಭಾರತದಲ್ಲಿ ಐಪಿಎಲ್ ಆಡುತ್ತಿರುವ ವಿದೇಶಿ ಆಟಗಾರರಿಗೆ ವ್ಯಾಕ್ಸಿನ್ ನೀಡುವುದಿಲ್ಲ ಪ್ರಸ್ತುತ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾದ ಆಟಗಾರರು ಇರುವ ಹಿನ್ನಲೆ ಆಯಾ ದೇಶಗಳಲ್ಲಿ ವ್ಯಾಕ್ಸಿನ್ ಪಡೆಯಲಿದ್ದು ದೇಶದಲ್ಲಿ ಭಾರತೀಯ ಆಟಗಾರರಿಗೆ ಮಾತ್ರ ಆದ್ಯತೆ ಎಂದು ಬಿಸಿಸಿಐ ಹೇಳಿದೆ.