ನವದೆಹಲಿ : ಭಾರತಕ್ಕೆ 3ನೇ ಕೊರೋನಾ ಲಸಿಕೆ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಮೇ 1ರಂದು ಸ್ಪುಟ್ನಿಕ್ ವಿ ಲಸಿಕೆಗಳು ಹಡಗಿನ ಮೂಲಕ ಭಾರತ ತಲುಪಲಿದೆ ಎಂದು ಮೂಲಗಳು ಹೇಳಿವೆ.
ಭಾರತದಲ್ಲಿ ತುರ್ತು ಬಳಕೆಗೆ ಸ್ಪುಟ್ನಿಕ್ ವಿ ಲಸಿಕೆಗೆ ಅ ಅನುಮತಿ ಸಿಕ್ಕ ಬೆನ್ನಲೆ ರಷ್ಯಾದಿಂದ ಹಡಗಿನಲ್ಲಿ ಹೊರಟಿರುವ ಸ್ಪುಟ್ನಿಕ್ ಲಸಿಕೆಗಳು ಮೇ 1ಕ್ಕೆ ಭಾರತ ತಲುಪುವುದನ್ನು ಹೈದರಾಬಾದ್ ಮೂಲದ ಡಾ.ರೆಡ್ಡಿಸ್ ಲ್ಯಾಬೋರೇಟರಿ ಖಚಿತಪಡಿಸಿದೆ
ಮೇ 1ರಿಂದಲೇ 3ನೇ ಹಂತದ ಲಸಿಕೆ ವಿತರಣೆ ಅಭಿಯಾನ ಶುರುವಾಗಲಿದ್ದು, 18ವರ್ಷದ ಮೇಲ್ಪಟ್ಟವರೆಲ್ಲರಿಗೂ ಕೊರೋನಾ ಲಸಿಕೆ ನೀಡಲು ನಿರ್ಧರಿಸಿದೆ. ಭಾರತದಲ್ಲಿ ಕೊವ್ಯಾಕ್ಸಿನ್ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಕಡಿಮೆಯಾಗಿರುವ ಸಮಯದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಆಗಮನದಿಂದ ವ್ಯಾಕ್ಸಿನ್ ಅಭಿಯಾನಕ್ಕೆ ಬಲ ಬಂದಿದೆ.

ಸದ್ಯ ರಷ್ಯಾದಿಂದ ಲಸಿಕೆ ರಫ್ತಾಗುತ್ತಿದ್ದು ಜೂನ್ ಬಳಿಕ ಭಾರತದಲ್ಲಿ ಇದರ ಉತ್ಪಾದನೆ ಶುರುವಾಗುವ ಸಾಧ್ಯತೆಗಳಿದೆ. ಡಾ.ರೆಡ್ಡಿಸ್ ಲ್ಯಾಬೋರೇಟರಿ ಸ್ಪುಟ್ನಿಕ್ ವಿ ಉತ್ಪಾದನಾ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಡಾ.ರೆಡ್ಡಿಸ್ ಸೇರಿ ದೇಶದ ಹಲವು ಫಾರ್ಮಾ ಕಂಪನಿಗಳಲ್ಲಿ ಸ್ಪುಟ್ನಿಕ್ ವಿ ಉತ್ಪಾದನೆಯಾಗಲಿದೆ.