“ಚುನಾವಣಾ ರ್ಯಾಲಿಗಳು ನಡೆದಾಗ ನೀವು ಇನ್ನೊಂದು ಗ್ರಹದಲ್ಲಿದ್ದೀರಾ?” – ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ
ತಮಿಳುನಾಡು : ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರಾಜಕೀಯ ರ್ಯಾಲಿಗಳಿಗೆ ಅವಕಾಶ ನೀಡಿದ್ದಕ್ಕಾಗಿ ಚುನಾವಣಾ ಆಯೋಗದ ವಿರುದ್ಧ ಮದ್ರಾಸ್ ಹೈಕೋರ್ಟ್ ಕೆಂಡಾಮಂಡಲವಾಗಿದ್ದು, ಆಯೋಗದ ಅಧಿಕಾರಿಗಳ ವಿರುದ್ಧ ಕೊಲೆ ಕೇಸ್ ದಾಖಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದೆ.
Madras High Court comes down heavily on Election Commission of India @ECISVEEP for allowing political rallies during #COVID
— Live Law (@LiveLawIndia) April 26, 2021
Chief Justice Sanjib Banerjee goes to the extent of saying "Election Commission officers should be booked on murder charges probably".#ElectionCommission pic.twitter.com/AZBAbV7yi4
ಇಂದು ವಿಚಾರಣೆ ವೇಳೆ ಚುನಾವಣಾ ಆಯೋಗ ಬೇಜವ್ದಾರಿ ವರ್ತನೆಯನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ, ಕೊರೊನಾ ಎರಡನೇ ತರಂಗ ಹೆಚ್ಚಾಗಲು ಚುನಾವಣಾ ಆಯೋಗ ಏಕೈಕ ಸಂಸ್ಥೆ ಕಾರಣ ಎಂದು ಛೀಮಾರಿ ಹಾಕಿದರು.
"Your institution is singularly responsible for the second wave of COVID-19", Chief Justice Sanjib Banerjee tells Election Commission of India.#MadrasHighCourt #ElectionCommission
— Live Law (@LiveLawIndia) April 26, 2021
ನ್ಯಾಯಾಲಯದ ಆದೇಶಗಳ ಹೊರತಾಗಿಯೂ, ಫೇಸ್‌ಮಾಸ್ಕ್ ಧರಿಸುವುದು, ಸ್ಯಾನಿಟೈಜರ್‌ಗಳ ಬಳಕೆ ಮತ್ತು ಚುನಾವಣಾ ಪ್ರಚಾರದ ಸಮಯದಲ್ಲಿ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವ ಬಗ್ಗೆ ಕೊರೊನಾ ಮಾನದಂಡಗಳನ್ನು ಜಾರಿಗೆ ತರಲು ಚುನಾವಣಾ ಆಯೋಗ ವಿಫಲವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
“ಚುನಾವಣಾ ರ್ಯಾಲಿಗಳು ನಡೆದಾಗ ನೀವು ಇನ್ನೊಂದು ಗ್ರಹದಲ್ಲಿದ್ದೀರಾ?” ಎಂದು ಮುಖ್ಯ ನ್ಯಾಯಮೂರ್ತಿ ಇಸಿಐ ಸಲಹೆಗಾರರನ್ನು ಕೇಳಿದರು.
"Were you on another planet when the election rallies were held?", Chief Justice of Madras High Court asks ECI.#MadrasHighCourt
— Live Law (@LiveLawIndia) April 26, 2021
ಮತ ಎಣಿಕೆ ದಿನದಂದು ಕೊರೊನಾ ಪ್ರೋಟೋಕಾಲ್ ಅನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಇಸಿಐ ಯೋಜನೆಯ ನೀಲನಕ್ಷೆಯನ್ನು ಹಾಕದಿದ್ದರೆ ಮೇ 2 ರಂದು ನಿಗದಿಯಾದ ಎಣಿಕೆಯನ್ನು ನಿಲ್ಲಿಸುವುದಾಗಿ ನ್ಯಾಯಾಲಯ ಎಚ್ಚರಿಸಿದರು.
Madras HC warns that it will stop counting on May 2 if the ECI does not put in place a proper plan to ensure following of #COVID19 protocol#MadrasHighCourt #ElectionCommission
— Live Law (@LiveLawIndia) April 26, 2021
ಸಾರ್ವಜನಿಕ ಆರೋಗ್ಯವು ಅತ್ಯಂತ ಮಹತ್ವದ್ದಾಗಿದೆ ಮತ್ತು ಅಂತಹ ವಿಷಯದಲ್ಲಿ ಸಾಂವಿಧಾನಿಕ ಅಧಿಕಾರಿಗಳಿಗೆ ಪರಿಸ್ಥಿತಿ ನೆನಪಿಸಬೇಕಾಗಿರುವುದು ದುಃಖಕರವಾಗಿದೆ. ನಾಗರಿಕರು ಬದುಕುಳಿದಾಗ ಮಾತ್ರ ಪ್ರಜಾಪ್ರಭುತ್ವ ಗಣರಾಜ್ಯವು ಖಾತರಿಪಡಿಸುವ ಹಕ್ಕುಗಳನ್ನು ಆನಂದಿಸಲು ಸಾಧ್ಯವಾಗುತ್ತದೆ “ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
"Public health is of paramount importance and it is distressing that constitutional authorities have to be reminded in such regard. It is only when a citizen survives that he'll be able to enjoy the rights that a democratic republic guarantees", Chief Justice tells ECI.
— Live Law (@LiveLawIndia) April 26, 2021
ನ್ಯಾಯಮೂರ್ತಿ ಸೆಂಥಿಲ್ ಕುಮಾರ್, ರಾಮಮೂರ್ತಿ ಅವರನ್ನೂ ಒಳಗೊಂಡ ನ್ಯಾಯಪೀಠವು ಆರೋಗ್ಯ ಚುನಾವಣಾ ಆಯೋಗ ಮತ್ತು ತಮಿಳುನಾಡು ಮುಖ್ಯ ಚುನಾವಣಾಧಿಕಾರಿಗೆ ಆರೋಗ್ಯ ಕಾರ್ಯದರ್ಶಿಯೊಂದಿಗೆ ಸಮಾಲೋಚನೆ ನಡೆಸಲು ಮತ್ತು ಎಣಿಕೆ ದಿನದಂದು ಕೊರೊನಾ ನಿಯಮಗಳನ್ನು ಅನುಸರಿಸುವ ಯೋಜನೆಯನ್ನು ಜಾರಿ ತರಲು ಹೈಕೋರ್ಟ್ ನಿರ್ದೇಶಿಸಿತು.