ನವದೆಹಲಿ : ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದೆ, ಬಿಕ್ಕಟ್ಟಿನ ಪರಿಸ್ಥಿತಿ ಮುಂದುವರಿದಿದೆ. ಈ ಸಂದರ್ಭದಲ್ಲಿ ಭಾರತದ ಸಂಕಷ್ಟಕ್ಕೆ ಹಲವು ದೇಶಗಳು ವೈದ್ಯಕೀಯ ನೆರವು ನೀಡಲು ಮುಂದಾಗಿವೆ.
ಅಮೇರಿಕಾ, ಯುಕೆ, ಜರ್ಮನಿ,ದುಬೈ ಸೇರಿ ಜಗತ್ತಿನ ಹಲವು ದೇಶಗಳು ಭಾರತಕ್ಕೆ ವೈದ್ಯಕೀಯ ನೆರವು ನೀಡುತ್ತಿದೆ. ವೈದ್ಯಕೀಯ ಆಕ್ಸಿಜನ್ ಸೇರಿ ಹಲವು ಅಗತ್ಯ ವೈದ್ಯಕೀಯ ಬೇಡಿಕೆಗಳನ್ನು ಪೂರೈಸುವ ಕೆಲಸ ಮಾಡಲಾಗುತ್ತಿದೆ.
نرسل رسالة أملٍ وتضامن ودعم للشعب الهندي في هذه الأوقات العصيبة، متمنين أن يتخطوا هذه المحنة بقوتهم واتحادهم#برج_خليفة
— Burj Khalifa (@BurjKhalifa) April 25, 2021
Sending hope, prayers, and support to India and all its people during this challenging time. #BurjKhalifa #StayStrongIndia pic.twitter.com/y7M0Ei5QP5
ಒಂದೆಜ್ಜೆ ಮುಂದೆ ಹೋಗಿರುವ ಸೌದಿ ಅರೇಬಿಯಾ ಭಾರತಕ್ಕೆ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದು ನೈತಿಕ ಸ್ಥೈರ್ಯ ತುಂಬುಕ ಕೆಲಸ ಮಾಡುತ್ತಿದೆ. ನಿನ್ನೆ ರಾತ್ರಿ ಯುಎಇಯ ದುಬೈನ ಹೆಗ್ಗುರುತು ಮತ್ತು ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಭಾರತದ ತ್ರಿವರ್ಣ ಧ್ವಜ ಮೂಡಿಸಲಾಗಿತ್ತು. ಸ್ಟೇ ಸ್ಟ್ರಾಂಗ್ ಇಂಡಿಯಾ ಅನ್ನೊ ಪದಗಳೊಂದಿಗೆ ಶಕ್ತಿ ತುಂಬುವ ಪ್ರಯತ್ನ ಮಾಡಿದೆ.

ಭಾರತದ ಜೊತೆಗೆ ನಿರಂತರ ಸಂಪರ್ಕದಲ್ಲಿರುವ ದುಬೈ ರಾಜತಾಂತ್ರಿಕರು ಭಾರತಕ್ಕೆ ಈಗಾಗಲೇ ವೈದ್ಯಕೀಯ ಆಕ್ಸಿಜನ್ ಕಳುಹಿಸಿದ್ದಾರೆ ಮತ್ತಷ್ಟು ವೈದ್ಯಕೀಯ ನೆರವು ನೀಡುವ ಭರವಸೆ ನೀಡಿದ್ದಾರೆ.
Thank You UAE 🇦🇪 , For Giving So much Support to India 🇮🇳 . #StayStrongIndia #BurjKhalifa https://t.co/O6aHO1dIrO
— Siddharth Shekhar (@siddharth_SSR_) April 26, 2021
Thank you United Arab Emirates🙏#StayStrongIndia #BurjKhalifa #IndiaFightsCorona @BurjKhalifa pic.twitter.com/ED5EM6m5Zr
— 𝐔𝐃𝐀𝐘 𝐓𝐇𝐀𝐊𝐔𝐑 (@MrUdayThakur) April 26, 2021
ಸೌದಿ ಅರೇಬಿಯಾದ ಈ ಕಾರ್ಯಕ್ಕೆ ಟ್ವಿಟರ್ ನಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಮತ್ತು ಭಾರತೀಯರು ಸೌದಿಗೆ ಧನ್ಯವಾದ ತಿಳಿಸುತ್ತಿದ್ದಾರೆ.